
ವಿಟ್ಲ: ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣ ಮತದಾನ ಕೇಂದ್ರದಲ್ಲಿ ಮತಯಂತ್ರ ದೋಷಕಂಡುಬಂದಿದ್ದು, ಮತದಾನಕ್ಕೆ ಅಡಚಣೆಯಾಗಿದೆ.
ಕರೋಪಾಡಿಯ ಬೂತ್ ಸಂಖ್ಯೆ 240 ಪದ್ಯಾಣದಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ತಡವಾಗಿ ಮತದಾನ ಆರಂಭವಾಗಿದೆ. ಇದರಿಂದಾಗಿ ಬಹುಹೊತ್ತು ಮತದಾರರು ಸರತಿ ಸಾಲಿನಲ್ಲಿ ನಿಲ್ಲುವಂತಾಯಿತು.
ಪದ್ಯಾಣ ಕರೋಪಾಡಿ ಶಾಲೆಯಲ್ಲಿ ನಡೆಯುವ ಮತದಾನದ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಇದರ ರಿಪೇರಿ ಕಾರ್ಯ ಮಾಡಲಾಗಿದೆ ಮತಯಂತ್ರದಲ್ಲಿರುವ ಒಂದು ಬಟನ್ ಕೆಲಸ ಮಾಡದ ಹಿನ್ನೆಲೆಯಲ್ಲಿ ಮತದಾನಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.