ಪುತ್ತೂರು: ಕರ್ನಾಟಕ ಸರಕಾರ, ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಮೈಸೂರಿನ ವಿಶ್ವವಿದ್ಯಾನಿಲಯ ಈಜು ಕೊಳದಲ್ಲಿ ನ.8 ಮತ್ತು 9ರಂದು ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 9ನೇ ತರಗತಿಯ ವಿದ್ಯಾರ್ಥಿ ಲಿಖಿತ್ ರಾಮಚಂದ್ರ ರವರು 4 ಬೆಳ್ಳಿ ಮತ್ತು 1 ಕಂಚಿನ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

17 ವರ್ಷ ವಯೋಮಿತಿಯೊಳಗಿನ ಬಾಲಕರ ಈಜು ಸ್ಪರ್ಧೆಯಲ್ಲಿ ವೈಯುಕ್ತಿಕ 800ಮೀ ಫ್ರೀ ಸ್ಟೈಲ್, 200ಮೀ ಮೆಡ್ಲೆ ರಿಲೇ ಯಲ್ಲಿ ಬೆಳ್ಳಿ ಪದಕ 100ಮೀ ಬ್ರೆಸ್ಟ್ರೋಕ್ ನಲ್ಲಿ ಕಂಚು ಹಾಗೂ ಗುಂಪು ಸ್ಪರ್ಧೆಗಳಾದ 100ಮೀ ಫ್ರೀ ಸ್ಟೈಲ್ ರಿಲೇ ಮತ್ತು 100 ಮೀ ಮೆಡ್ಲೆ ರಿಲೇಯಲ್ಲಿ ಬೆಳ್ಳಿ ಪದಕಗಳನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಡಿ.29ರಿಂದ ಜ.5ರ ತನಕ ನವ ದೆಹಲಿಯ ತ್ಯಾಗರಾಜ್ ಈಜು ಕ್ರೀಡಾಂಗಣದಲ್ಲಿ ನಡೆಯಲಿರುವ 69ನೇ ರಾಷ್ಟ್ರೀಯ ಸ್ಕೂಲ್ ಗೇಮ್ಸ್ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಭಾಗವಹಿಸಲಿದ್ದಾರೆ. ಇವರು ಪುತ್ತೂರು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿರುವ ರಾಮಚಂದ್ರ ಎ ಹಾಗೂ ದೀಪಾರಾಣಿ ದಂಪತಿ ಪುತ್ರ.
ಇವರು ಪರ್ಲಡ್ಕ ಬಾಲವನ ಡಾ| ಶಿವರಾಮ ಕಾರಂತ ಇಲ್ಲಿನ ಅಕ್ವಾಟಿಕ್ ಕ್ಲಬ್ನ ಈಜು ನಿರ್ದೇಶಕ ಪಾರ್ಥ ವಾರಣಾಸಿ ಹಾಗೂ ತರಬೇತುದಾರರಾದ ನಿರೂಪ್, ರೋಹಿತ್, ದೀಕ್ಷಿತ್ ರಾವ್ ಹಾಗೂ ಪಕಾ ಕ್ರಾಂತಿ ತೇಜ ರವರಿಂದ ಈಜು ತರಬೇತಿ ಪಡೆಯುತ್ತಿದ್ದಾರೆ.