ಬೊಳುವಾರು : ವ್ಹೀಲ್‌ಚೇರ್ ಮೂಲಕ ಮತ ಚಲಾಯಿಸಿದ್ದ ವೃದ್ಧೆ ದೇವಕಿ ನಿಧನ

0

ಪುತ್ತೂರು : ಬೊಳುವಾರು ನಿವಾಸಿ ಸುಬ್ರಹ್ಮಣ್ಯ ಭಟ್ ಇವರ ಪತ್ನಿ ದೇವಕಿ ಸುಬ್ರಹ್ಮಣ್ಯ ಭಟ್(81) ಏ.26 ರಂದು ರಾತ್ರಿ ನಿಧನರಾಗಿದ್ದಾರೆ.

ಏ.26 ರ ಬೆಳಗ್ಗೆ ಬೊಳುವಾರು ಶಾಲಾ ಮತಗಟ್ಟೆಗೆ (123) ಬಿ ಎಲ್ ಓ ಯಶೋಧ ಇವರ ಸಹಾಯದಿಂದ ವ್ಹೀಲ್‌ಚೇರ್ ಮೂಲಕ ದೇವಕಿಯವರು ಆಗಮಿಸಿ , ಮತ ಚಲಾವಣೆ ಮಾಡಿದ್ದರು. ರಾತ್ರಿ ಮನೆಯಲ್ಲೇ ವಯೋಸಹಜ ಕಾರಣದಿಂದ ನಿಧನ ಹೊಂದಿದ್ದಾರೆ.


ಮಾಜಿ ಶಾಸಕ ಸಂಜೀವ ಮಠಂದೂರು , ನಗರಸಭಾ ಸದಸ್ಯ ಸಂತೋಷ್ ಕುಮಾರ್ ಬೊಳುವಾರು , ರಾಮ್ದಾಸ್ ಹಾರಾಡಿ ಹಾಗೂ ಬೊಳುವಾರು ಬೂತ್ ಸಂಖ್ಯೆ 123 ಇದರ ಅಧ್ಯಕ್ಷ ದಯಾಕರ್ ಸಹಿತ ಹಲವರು ಮೃತರ ಅಂತಿಮ ದರ್ಶನ ಪಡೆದರು.ಮೃತರು ಗಂಡ ಸುಬ್ರಹ್ಮಣ್ಯ ಭಟ್ ಮತ್ತು 6 ಮಂದಿ ಪುತ್ರಿಯರ ಸಹಿತ ಮೊಮ್ಮಕ್ಕಳು ಹಾಗೂ ಮರಿಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here