ಮೇ.1 ರಿಂದ ಬಪ್ಪಳಿಗೆ ಶ್ರೀ ಮಾರಿಯಮ್ಮ ದೇವಸ್ಥಾನದ ದ್ವಿತೀಯ ಪ್ರತಿಷ್ಠಾ ವರ್ಧಂತಿ, ವಾರ್ಷಿಕ ಮಾರಿಪೂಜೆ

0

ಪುತ್ತೂರು: ಇತಿಹಾಸ ಪ್ರಸಿದ್ದ ಬಪ್ಪಳಿಗೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಮೇ.1 ರಿಂದ ಮೇ.7ರವರೆಗೆ ದ್ವಿತೀಯ ಪ್ರತಿಷ್ಠಾ ವರ್ಧಂತಿ‌ ಮತ್ತು ವಾರ್ಷಿಕ ಮಾರಿಪೂಜೆಯು ನಡೆಯಲಿದೆ.

ಮೇ.1ರ ಬೆಳ್ಳಿಗೆ 9:30ಕ್ಕೆ ಗೊನೆಮುಹೂರ್ತ ನೆರವೇರಲಿದ್ದು, ಕರ್ನಾಟಕ ಸರಕಾರದ ಧಾರ್ಮಿಕ ಪರಿಷತ್ತು ಇದರ ಮಾಜಿ ಸದಸ್ಯ ಎನ್. ಕೆ. ಜಗನ್ನಿವಾಸ ರಾವ್ ಉಪಸ್ಥಿತರಿರುವರು. ರಾತ್ರಿ 7:30ರಿಂದ ಭಜನೆ ನಂತರ, ಮಹಾಪೂಜೆ ಜರುಗಲಿದೆ. ಮೇ.2 ರಿಂದ 4ರವರೆಗೆ ಪ್ರತಿನಿತ್ಯ ಸಂಜೆ 7:30 ರಿಂದ ಭಜನೆ ನಂತರ ಮಹಾಪೂಜೆ ನಡೆಯಲಿದೆ. ಮೇ.5 ಆದಿತ್ಯವಾರದಂದು ರಾತ್ರಿ 8:00ಕ್ಕೆ ಶ್ರೀ ಅಲೇರ ಪಂಜುರ್ಲಿ ಮತ್ತು ಸತ್ಯಸಾರಮಣಿ ದೈವಗಳಿಗೆ ತಂಬಿಲ ಸೇವೆ ನಡೆದು ನಂತರ ಪ್ರಸಾದ ವಿತರಣೆ ನಡೆಯಲಿದೆ.

ಮೇ.6ರಂದು ಬೆಳಿಗ್ಗೆ 7:30 ರಿಂದ ಬ್ರಹ್ಮಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಕೆಮ್ಮಿಂಜೆ ಇವರ ನೇತೃತ್ವದಲ್ಲಿ ಗಣಪತಿ ಹೋಮ, ಪ್ರತಿಷ್ಠಾ ವರ್ಧಂತಿ, ಮಧ್ಯಾಹ್ನ ಗಂಟೆ 1:00ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು, ರಾತ್ರಿ ಗಂಟೆ 8:00ಕ್ಕೆ ಅಮ್ಮನವರಿಗೆ ಮಹಾಪೂಜೆ ನಂತರ ದೈವಗಳ ಗಡಿಸವಾರಿ, ಕಾಲೋನಿ ಸಂಚಾರ, ರಾತ್ರಿ ಗಂಟೆ 12:00ಕ್ಕೆ ಅಗ್ನಿಸೇವೆ ನಂತರ ಅಮ್ಮನವರ ಭಂಡಾರ ಬಯಲು ಮಂಟಪಕ್ಕೆ ತೆರಳುವುದು. ಆ ಬಳಿಕ ಮಹಾಪೂಜೆ ನೆರವೇರಲಿದೆ. ಮೇ.7ರಂದು ಮಧ್ಯಾಹ್ನ 12:00ಕ್ಕೆ ಮಹಾಪೂಜೆ, ಅಮ್ಮನವರ ಹಾಗೂ ದೈವಗಳ ದರ್ಶನ ಮತ್ತು ಅಭಯ, ಹರಕೆ ಸ್ವೀಕಾರ ನಂತರ ಸಾರ್ವಜನಿಕ ಅನ್ನಸಂರ್ಪಣೆ ನಡೆಯಲಿದ್ದು, ಸಂಜೆ ಗಂಟೆ 6:00ಕ್ಕೆ ಅಮ್ಮನವರ ಉತ್ಸವ ಮೂರ್ತಿ ಮರಳಿ ದೇವಸ್ಥಾನಕ್ಕೆ ತೆರಳಿ ಮಹಾಪೂಜೆಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ. ಭಗವದ್ಭಕ್ತರಾದ ತಾವೆಲ್ಲರೂ ಭಾಗವಹಿಸಿ ತನು-ಮನ-ಧನ ನೀಡಿ ಸಹಕರಿಸಬೇಕಾಗಿ ದೇವಾಲಯದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here