ಸಾರ್ಯ ಅಲ್ ಅಮಲ್ ಜುಮಾ ಮಸ್ಜಿದ್‌ನಲ್ಲಿ ಏಕದಿನ ಧಾರ್ಮಿಕ ಮತಪ್ರಭಾಷಣ

0

ಅಲ್ಲಾಹು ನೀಡಿದ ಅಮೂಲ್ಯ ಸಮಯವನ್ನು ಒಳಿತಿನ ಕ್ಷೇತ್ರದಲ್ಲಿ ವಿನಿಯೋಗಿಸಿ- ಅಶ್ರಫ್ ಸಅದಿ ಮಲ್ಲೂರು

ಪುತ್ತೂರು: ಅಲ್ ಅಮಲ್ ಜುಮಾ ಮಸ್ಜಿದ್ ಸಾರ್ಯ ಇದರ ಆಶ್ರಯದಲ್ಲಿ ಮಾಸಿಕ ಬದ್ರ್ ಮೌಲೂದ್, ಸ್ವಲಾತ್ ಮಜ್ಲಿಸ್ ಮತ್ತು ಖುತುಬಿಯ್ಯತ್ ನೇರ್ಚೆಯ 34ನೇ ವಾರ್ಷಿಕೋತ್ಸವದ ಅಂಗವಾಗಿ ಏಕದಿನ ಧಾರ್ಮಿಕ ಮತ ಪ್ರಭಾಷಣ ಎ.28ರಂದು ನಡೆಯಿತು.ಶೈಖುನಾ ಮಹಮೂದುಲ್ ಫೈಝಿ ಓಲೆಮುಂಡೋವು ದುವಾಶೀರ್ವಚನ ನೀಡಿದರು.ಸಾಜ ಎಂಜೆಎಂ ಖತೀಬ್ ಹಾಫಿಳ್ ಉಮ್ಮರ್ ಫಾರೂಕ್ ಸಖಾಫಿ ಹಿಮಮಿ ಉದ್ಘಾಟಿಸಿದರು.ಮಂಜ ಮರ್ಕಝ್ ಅಕಾಡೆಮಿ ಆಫ್ ಥಿಯೋಲಜಿಯ ಮುದರ್ರಿಸ್ ರಾಶಿದ್ ಸಖಾಫಿ ಮಳ್ಹರಿ ಹಾಗೂ ಪರಿಯಾಲ್ತಡ್ಕ ಮಸೀದಿಯ ಅಧ್ಯಕ್ಷ ಎಂ.ಎಸ್ ಮುಹಮ್ಮದ್ ಮಾತನಾಡಿದರು.

ಮುಖ್ಯಪ್ರಭಾಷಣ ನಡೆಸಿದ ಅಶ್ರಫ್ ಸಅದಿ ಮಲ್ಲೂರುರವರರು ಅಲ್ಲಾಹು ನಮಗೆ ನೀಡಿದ ಅಮೂಲ್ಯ ಸಮಯವನ್ನು ಒಳಿತಿನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ನಮ್ಮ ಜೀವನವನ್ನು ಸಾರ್ಥಕಗೊಳಿಸಬೇಕು ಎಂದು ಹೇಳಿದರು. ಜನರನ್ನು ಅವರ ಮಾತು, ಧರಿಸಿದ ಉಡುಪು ನೋಡಿ ಒಳ್ಳೆಯವರು, ಕೆಟ್ಟವರು ಎಂದು ತೀರ್ಮಾನಿಸಬೇಡಿ, ಹೃದಯ ಶುದ್ದಿಯಿರುವವರು ನಿಜವಾದ ಒಳ್ಳೆಯವರು ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಮಂಜ ಎಂಜೆಎಂ ಖತೀಬ್ ರವೂಫ್ ಹಾಶಿಮಿ, ಸಾರ್ಯ ಎಂಜೆಎಂ ಸದರ್ ಮುಅಲ್ಲಿಂ ಹೈದರ್ ಹಾಶಿಮಿ, ಸಾಜ ಎಂಜೆಎಂ ಸದರ್ ಮುಅಲ್ಲಿಂ ಸಫ್ವಾನ್ ಅಲ್ ಹಿಖಮಿ, ಸಾಜ ಮಸೀದಿ ಅಧ್ಯಕ್ಷ ಹಮೀದ್ ಎ.ಕೆ, ಮಂಜ ಮಸೀದಿ ಅಧ್ಯಕ್ಷ ಉಮ್ಮರ್ ಫಾರೂಕ್, ಸಾರ್ಯ ಕೆವೈಎ ಅಧ್ಯಕ್ಷ ಶರೀಫ್ ಹಿಮಮಿ, ಸಾರ್ಯ ಅಲ್ ಅಮಲ್ ಜುಮಾ ಮಸೀದಿ ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ, ಮುಕ್ರಂಪಾಡಿ ಮಸೀದಿ ಖತೀಬ್ ಸಿದ್ದೀಕ್ ಫೈಝಿ ಉಪಸ್ಥಿತರಿದ್ದರು. ಸಾರ್ಯ ಮಸೀದಿ ಖತೀಬ್ ಅಬ್ದುಲ್ ನಾಸಿರ್ ರಝ್ವಿ ಸ್ವಾಗತಿಸಿ ಪ್ರಸ್ತಾವನೆಗೈದರು. ಮಗ್ರಿಬ್ ನಮಾಜಿನ ನಂತರ ಶೈಖುನಾ ಓಲೆಮುಂಡೋವು ಉಸ್ತಾದ್ ನೇತೃತ್ವದಲ್ಲಿ ವಾರ್ಷಿಕ ಖುತುಬಿಯತ್ ನೇರ್ಚೆ ನಡೆಯಿತು. ಸಾರ್ಯ ಅಲ್ ಅಮಲ್ ಜಮಾಅತ್ ಕಮಿಟಿಯವರು, ಅಲ್ ಅಮಲ್ ಗಲ್ಫ್ ಕಮಿಟಿಯವರು, ಖುತುಬಿಯಾ ಯಂಗ್‌ಮೆನ್ಸ್ ಕಮಿಟಿಯವರು ಸಹಕರಿಸಿದರು.

ಯೂಸುಫ್ ಗೌಸಿಯಾರವರಿಗೆ ಸನ್ಮಾನ:
ಸುನ್ನೀ ಮೆನೇಜ್‌ಮೆಂಟ್ ಅಸೋಸಿಯೇಶನ್ ದ.ಕ ಈಸ್ಟ್ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡಿರುವ, ಸಾರ್ಯ ಅಲ್ ಅಮಲ್ ಜುಮಾ ಮಸೀದಿಯ ಅಧ್ಯಕ್ಷರೂ ಆಗಿರುವ ಯೂಸುಫ್ ಗೌಸಿಯಾ ಸಾಜ ಅವರನ್ನು ಜಮಾಅತ್ ಪರವಾಗಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here