ಪುತ್ತೂರು: ಬನ್ನೂರು ವಿದ್ಯಾಗಣಪತಿ ದೇವಸ್ಥಾನದಲ್ಲಿ ಬೊಳುವಾರು ಶ್ರೀಆಂಜನೇಯ ಯಕ್ಷಗಾನ ಕಲಾ ಸಂಘದ ಸದಸ್ಯರಿಂದ ಎ.30ರಂದು ತಿಂಗಳ ಸರಣಿ ಯಕ್ಷಗಾನ ತಾಳಮದ್ದಳೆ ” ಅತಿಕಾಯ ಮೋಕ್ಷ ” ( ಹಟ್ಟಿಯಂಗಡಿ ರಾಮ ಭಟ್ ವಿರಚಿತ ) ನಡೆಯಿತು.
ಹಿಮ್ಮೇಳದಲ್ಲಿ ಯಲ್ ಯನ್ ಭಟ್, ಜಯಪ್ರಕಾಶ್ ನಾಕೂರು, ಆನಂದಸವಣೂರು, ಪದ್ಯಾಣ ಶಂಕರನಾರಾಯಣ ಭಟ್, ಪ್ರೊ.ದಂಬೆ ಈಶ್ವರ ಶಾಸ್ತ್ರೀ, ಮಾ.ಪರೀಕ್ಷಿತ್ ಪುತ್ತೂರು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ ( ಕು೦ಬ್ಳೆ ಶ್ರೀಧರ್ ರಾವ್ ಮತ್ತು ಭಾಸ್ಕರ್ ಬಾರ್ಯ ), ರಾವಣ ( ಪಕಳಕುಂಜ ಶ್ಯಾಮ್ ಭಟ್ ), ಅತಿಕಾಯ ( ಗುಂಡ್ಯಡ್ಕ ಈಶ್ವರ ಭಟ್ ), ಲಕ್ಷ್ಮಣ ( ಗುಡ್ಡಪ್ಪ ಬಲ್ಯ ), ವಿಭೀಷಣ ( ಮಾಂಬಾಡಿ ವೇಣುಗೋಪಾಲ ಭಟ್ ), ರಾಕ್ಷಸ ದೂತ ( ಬಡೆಕ್ಕಿಲ ಚಂದ್ರಶೇಖರ್ ಭಟ್ ) ಸಹಕರಿಸಿದರು. ಭಾಸ್ಕರ್ ಬಾರ್ಯ ಸ್ವಾಗತಿಸಿ ಪುಳುಈಶ್ವರ ಭಟ್ ವಂದಿಸಿದರು. ಮಾಂಬಾಡಿ ವೇಣುಗೋಪಾಲ ಭಟ್ ಪ್ರಾಯೋಜಿಸಿದ್ದರು.