ಉಪ್ಪಿನಂಗಡಿ:ಮೂಡಬಿದ್ರೆ ವೆಂಕಟರಮಣ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿದ್ದ ಉಪ್ಪಿನಂಗಡಿ ನಿವಾಸಿ ಯುವಕ ಜ್ವರದಿಂದ ಜ್ವರ ಬಾಧಿತರಾಗಿ ಸಾವಿಗೀಡಾದ ಘಟನೆ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪ್ಪಿನಂಗಡಿ ನಟ್ಟಿಬೈಲು ನಿವಾಸಿ ಹೆಚ್.ಲಕ್ಷ್ಮೀನಾರಾಯಣ ಭಟ್‌ರವರ ಮಗ ವಿನಾಯಕ ಭಟ್ (32ವ.)ಮೃತಪಟ್ಟವರು.ಸುಮಾರು 10 ವರ್ಷಗಳಿಂದ ಮೂಡಬಿದ್ರೆ ವೆಂಕಟರಮಣ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಕೆಲಸ ಮಾಡಿಕೊಂಡಿದ್ದ ವಿನಾಯಕ ಭಟ್ ಅವರ, ಏ.04ರಂದು ಸಂಜೆ 5 ಗಂಟೆಗೆ ಜ್ವರ ಜೋರಾಗಿದೆ ಎಂದು ಮನೆಗೆ ಬಂದಿದ್ದರು.ಅವರನ್ನು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.ಅಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದ ಅವರಿಗೆ ಏ.30ರಂದು ಜ್ವರ ಜೋರಾಗಿರುವುದರಿಂದ ಪತ್ನಿ ಕಲಾವತಿ ಭಟ್ ಅವರು ಮಧ್ಯಾಹ್ನ ಆಂಬುಲೆನ್ಸ್ ಒಂದರಲ್ಲಿ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ವಿನಾಯಕ ಭಟ್ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದರು.ಅವರು ಜ್ವರ ತೀವ್ರಗೊಂಡು ಮೃತಪಟ್ಟಿರುವುದಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ(ಯುಡಿಆರ್ ನಂಬ್ರ 15/2024) ಕಲಂ:174 ಸಿಅರ್‌ಪಿಸಿಯಡಿ ಪ್ರಕರಣ ದಾಖಲಾಗಿರುತ್ತದೆ.