ಅಧ್ಯಕ್ಷರಾಗಿ ಯೂಸುಫ್ ಗೌಸಿಯಾ ಸಾಜ, ಪ್ರ.ಕಾರ್ಯದರ್ಶಿಯಾಗಿ ಉವೈಸ್ ಬೀಟಿಗೆ, ಕೋಶಾಧಿಕಾರಿಯಾಗಿ ಅಬೂಬಕ್ಕರ್ ಉಕ್ಕುಡ ಆಯ್ಕೆ
ಪುತ್ತೂರು: ಇತಿಹಾಸ ಪ್ರಸಿದ್ಧ ಬೆಳಿಯೂರುಕಟ್ಟೆ ಮಂಜ ದರ್ಗಾ ಶರೀಫ್ ಉರೂಸ್ ಸಮಾರಂಭ ಮೇ.9ರಿಂದ 11ರ ವರೆಗೆ ನಡೆಯಲಿದ್ದು ಅದರ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಯೂಸುಫ್ ಗೌಸಿಯಾ ಸಾಜ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಉವೈಸ್ ಬೀಟಿಗೆ ಹಾಗೂ ಕೋಶಾಧಿಕಾರಿಯಾಗಿ ಅಬೂಬಕ್ಕರ್ ಉಕ್ಕುಡ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಯು.ಟಿ ಅಲಿ ಪಾಲಸ್ತಡ್ಕ, ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ, ಅಬ್ದುಲ್ ಹಮೀದ್ ಎ.ಕೆ ಸಾಜ, ಅಬ್ದುಲ್ಲ ಕುಂಞಿ ಸಾರ್ಯ, ಕಾರ್ಯದರ್ಶಿಗಳಾಗಿ ಎ.ಕೆ ರಿಯಾಝ್ ಬುಳೇರಿಕಟ್ಟೆ, ಖಲಂದರ್ ಕಬಕ ಆಯ್ಕೆಯಾದರು. ಅಲ್ಲದೇ 101 ಮಂದಿ ಸದಸ್ಯರನ್ನು ಸಮಿತಿಗೆ ಆಯ್ಕೆ ಮಾಡಲಾಯಿತು.
ಮಂಜ ಮಸ್ಜಿದುಲ್ ಅನ್ಸಾರ್ ಗೌರವಾಧ್ಯಕ್ಷರಾದ ಸಯ್ಯಿದ್ ಫಕ್ರುದ್ದೀನ್ ಹದ್ದಾದ್ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಶೈಖುನಾ ಮಹಮೂದುಲ್ ಫೈಝಿ ಓಲೆಮುಂಡೋವು ಉದ್ಘಾಟಿಸಿದರು. ಕುಂಬ್ರ ಮರ್ಕಝುಲ್ ಹುದಾದ ಅಧ್ಯಕ್ಷ ಅಬ್ದುಲ್ ರಹ್ಮಾನ್ ಹಾಜಿ ಅರಿಯಡ್ಕ ಶುಭ ಹಾರೈಸಿದರು. ಮಂಜ ಮರ್ಕಝ್ ಅಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ವಿಷಯ ಮಂಡಿಸಿ ಮಾತನಾಡಿದರು. ಅಗಲಿದ ಸಯ್ಯಿದ್ ಕರುವೇಲ್ ಸಾದತ್ ತಂಙಳ್ ಹಾಗೂ ಕುಂಬ್ರ ಮರ್ಕಝ್ ವಿದ್ಯಾರ್ಥಿನಿ ರಫಾ ಫಾತಿಮಾ ಅವರ ಸ್ಮರಣೆ ಕಾರ್ಯಕ್ರಮ ಇದೇ ವೇಳೆ ನಡೆಸಲಾಯಿತು.
ಮರ್ಕಝ್ ಮಂಜ ಪ್ರಧಾನ ವ್ಯವಸ್ಥಾಪಕ ಇಬ್ರಾಹಿಂ ಖಲೀಲ್ ಮಾಲಿಕಿ ಸ್ವಾಗತಿಸಿದರು. ಕಲಂದರ್ ಕಬಕ ವಂದಿಸಿದರು.