ಮೇ.3,4: ಅರಿಯಡ್ಕ ಏಳ್ನಾಡುಗುತ್ತಿನ ಬಾಕಿಮಾರು ಗದ್ದೆಯಲ್ಲಿ ದೊಂಪದಬಲಿ ನೇಮೊತ್ಸವ

0

ಪುತ್ತೂರು: ಅರಿಯಡ್ಕ ಏಳ್ನಾಡುಗುತ್ತಿನ ಬಾಕಿಮಾರು ಗದ್ದೆಯಲ್ಲಿ ನಲ್ಕುರಿಯಂತೆ ನಡೆಯು ದೊಂಪದಬಲಿ ನೇಮೊತ್ಸವ ಮೇ.3 ಮತ್ತು 4ರಂದು ಅರಿಯಡ್ಕ ಗುತ್ತಿನ ಕುಟುಂಬದವರ ಮತ್ತು ಊರ ಭಕ್ತಾದಿಗಳ ಸಹಯೋಗದೊಂದಿಗೆ ನಡೆಯಲಿದೆ.
ಮೇ.3ರಂದು ಸಂಜೆ ಶಿರಾಡಿ ದೈವದ ಭಂಡಾರ ತೆಗೆದು ಅರಿಯಡ್ಕ ಬಾಕಿಮಾರು ಗದ್ದೆಯ ಕೊಡಿಯಾಡಿಯಲ್ಲಿ ಏರಿಸುವುದು. ಬಳಿಕ ಗ್ರಾಮದೈವ ಧೂಮಾತಿಯ ಭಂಡಾರ ತೆಗೆದು ಅರಿಯಡ್ಕ ಬಾಕಿಮಾರು ಗದ್ದೆಯ ಕೊಡಿಯಾಡಿಯಲ್ಲಿ ಏರಿಸುವುದು. ಮೇ.4ರಂದು ಬೆಳಿಗ್ಗೆ ಶಿರಾಡಿ ದಐವದ ನೇಮೋತ್ಸವ ಬಳಿಕ ಗ್ರಾಮ ದೈವ ಧೂಮಾತಿ ದೈವದ ನೇಮ, ರಾತ್ರಿ ಸಂಪ್ರದಾಯದಂತೆ ಮಾರಿ ಓಡಿಸು ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here