60 ವರ್ಷದಿಂದ ಬಳಕೆಯ ರಸ್ತೆಯ ವಿಚಾರ – ಹಲ್ಲೆ ಆರೋಪ – ಮಹಿಳೆ ಸಹಿತ ಮೂವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲು

0

ಪುತ್ತೂರು: ಉಪ್ಪಿನಂಗಡಿ ಗ್ರಾಮದ ಬೆತ್ತೋಡಿಯಲ್ಲಿ 60 ವರ್ಷದಿಂದ ಬಳಕೆಯಲ್ಲಿರುವ ರಸ್ತೆಯನ್ನು ಮುಚ್ಚಿದಕ್ಕೆ ಕೋರ್ಟ್ ಆದೇಶದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲು ರಸ್ತೆಯ ಗೇಟ್ ತೆರವಿಗೆ ಕೇಳಿಕೊಂಡಾಗ ತಂಡವೊಂದು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಮಹಿಳೆ ಸಹಿತ ಮೂವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಹರೀಶ್ ಬೆತ್ತೋಡಿ ಎಂಬವರ ಪತ್ನಿ ಪ್ರಮೀಳಾ, ಸಂಬಂಧಿಕರಾದ ದಿನೇಶ್, ಚರಣ್ ಎಂಬವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ’ಸುಮಾರು 60 ವರ್ಷದಿಂದ ಬಳಕೆಯಲ್ಲಿದ್ದ ರಸ್ತೆಯನ್ನು ನಮ್ಮ ಜಮೀನಿನ ಸಮೀಪದ ಜಾನಕಿ ಮನೆಯವರು ಏಕಾಏಕಿ ಬಂದ್ ಮಾಡಿದ್ದರು. ಈ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಿದಾಗ ನ್ಯಾಯಾಲಯ ಈ ಹಿಂದಿನಂತೆ ಯಥಾಸ್ಥಿತಿಯನ್ನು ಕಾಪಾಡುವಂತೆ ಆದೇಶ ನೀಡಿತ್ತು. ಹಾಗಾಗಿ ವೀಲ್ ಚಯರ್ ಫಲಾನುಭವಿ ನನ್ನ ಅತ್ತೆ ಸಾಂತಮ್ಮ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮೇ.2ರಂದು ರಸ್ತೆಗೆ ಅಳವಡಿಸಿದ ಗೇಟ್ ತೆರವು ಮಾಡಲು ಕೇಳಿಕೊಂಡಾಗ ಜಾನಕಿ ಮನೆಯವರು ವಿರೋಧ ವ್ಯಕ್ತಪಡಿಸಿದರು. ಹಾಗಾಗಿ ಬದಲಿ ರಸ್ತೆಯಾಗಿ ನಮ್ಮ ವರ್ಗ ಜಾಗದಲ್ಲಿ ಪ್ರತ್ಯೇಕ ಕಾಲು ದಾರಿ ನಿರ್ಮಾಣ ಮಾಡಲು ಜೆಸಿಬಿ ಬಂದಾಗ ಅಲ್ಲಿಗೂ ಜಾನಕಿ ಮನೆಯವರು ಬಂದು ಕಲ್ಲು ಬಿಸಾಡಿ ಕೆಲಸಕ್ಕೆ ಅಡ್ಡಿಪಡಿಸಿದರಲ್ಲದೆ ಜಾನಕಿ ಅವರ ಮಕ್ಕಳಾದ ಸತೀಶ್, ರಾಜೇಶ್, ಬೆಳ್ಳಾರೆಯ ಅಜೇಯ್ ಮತ್ತು ವಿಜಯ್, ಕಲ್ಲಡ್ಕದ ಸುಮಂತ್ ಅವರು ನನಗೆ ಮತ್ತು ನನ್ನ ಗಂಡನ ಭಾವ ದಿನೇಶ್, ಹಾಗು ಚರಣ್ ಅವರಿಗೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ. ಘಟನೆ ನಡೆಯುವ ಸಂದರ್ಭ ದಿನೇಶ್ ಅವರ ಕುತ್ತಿನಲ್ಲಿದ್ದ ಚಿನ್ನದ ಸರ ತುಂಡಾಗಿದ್ದು, ಘಟನೆಯ ಚಿತ್ರಿಕರಣ ಮಾಡುತ್ತಿದ್ದ ಚರಣ್ ಅವರ ಮೊಬೈಲ್ ಅನ್ನು ಅವರು ಎಳೆದು ಹಾನಿಗೊಳಿಸಿದ್ದಾರೆ ಎಂದು ಪ್ರಮೀಳಾ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here