ಅಂಬಿಕಾ ಮಹಾವಿದ್ಯಾಲಯದಲ್ಲಿ ಸಿಎ, ಐಬಿಪಿಎಸ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ

0

ನಿರಂತರ ಮಾರ್ಗದರ್ಶನದಿಂದ ಪರೀಕ್ಷೆ ತೇರ್ಗಡೆ ಹೊಂದುತ್ತಿರುವ ವಿದ್ಯಾರ್ಥಿಗಳು


ಪುತ್ತೂರು: ಸಿಎ ಮಾಡಬೇಕೆನ್ನುವುದು ಅನೇಕ ವಾಣಿಜ್ಯ ವಿದ್ಯಾರ್ಥಿಗಳ ಬಹುದೊಡ್ಡ ಕನಸು. ಹತ್ತನೆಯ ತರಗತಿ ಮುಕ್ತಾಯವಾಗುತ್ತಿದ್ದಂತೆ ಅನೇಕ ವಿದ್ಯಾರ್ಥಿಗಳು ಸಿಎ ಆಗಬೇಕೆಂಬ ಯೋಚನೆ – ಯೋಜನೆಯೊಂದಿಗೆ ವಾಣಿಜ್ಯ ವಿಭಾಗಕ್ಕೆ ಅಡಿ ಇಡುವುದಿದೆ. ವಿದ್ಯಾರ್ಥಿಗಳ ಈ ಕನಸನ್ನು ನನಸು ಮಾಡುವುದಕ್ಕಾಗಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯ ಮಹತ್ವದ ಹೆಜ್ಜೆಯನ್ನಿಟ್ಟು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ.


ಪುತ್ತೂರು ಪರಿಸರದಲ್ಲಿ ವಿದ್ಯಾರ್ಥಿಗಳ ಸಿಎ ಕನಸನ್ನು ನನಸು ಮಾಡುವುದಕ್ಕಾಗಿ ಅತ್ಯುತ್ತಮ ಕೋಚಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕೆಂಬ ಉದ್ದೇಶದೊಂದಿಗೆ ಸಿಎ ಫೌಂಡೇಶನ್, ಗ್ರೂಪ್ 1 ಹಾಗೂ 2 ತರಗತಿಗಳಿಗೆ ಸ್ವತಃ ಸಿ.ಎ ತೇರ್ಗಡೆಯಾದವರಿಂದಲೇ ಪಾಠ ಮಾಡಿಸುತ್ತಿರುವುದು ಈ ಸಂಸ್ಥೆಯ ವಿಶೇಷತೆ. ನುರಿತ ಕೋಚಿಂಗ್ ದೊರಕುತ್ತಿರುವುದರಿಮದ ಇಲ್ಲಿನ ವಿದ್ಯಾರ್ಥಿಗಳು ಸುಲಭವಾಗಿ ಸಿಎ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುತ್ತಿರುವುದು ಕಂಡುಬರುತ್ತಿದೆ.


ಕಳೆದ ಮೂರು ವರ್ಷಗಳಿಂದ ಅಂಬಿಕಾ ಮಹಾವಿದ್ಯಾಲಯ ಇಂತಹದ್ದೊಂದು ಪ್ರಯತ್ನಕ್ಕೆ ಅಡಿಯಿಟ್ಟಿದೆ. ಹಾಗೆಂದು ನಗರ ಪ್ರದೇಶಗಳಲ್ಲಿ ಸಿಎ ಕೋಚಿಂಗ್ ತರಗತಿಗಳಿಗೆ ವಿಧಿಸುವ ಕಾಲು ಭಾಗದಷ್ಟು ಶುಲ್ಕವನ್ನೂ ಸಂಸ್ಥೆ ವಿಧಿಸುತ್ತಿಲ್ಲ ಎಂಬುದು ಗಮನಾರ್ಹ ವಿಚಾರ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಣದ ಕೊರತೆಯ ಕಾರಣಕ್ಕಾಗಿ ಸಿಎಯಿಂದ ವಂಚಿತರಾಗಬಾರದೆಂಬ ಸ್ಪಷ್ಟ ಉದ್ದೇಶದೊಂದಿಗೆ ಅಂಬಿಕಾ ಮಹಾವಿದ್ಯಾಲಯ ಸಿಎ ಆಕಾಂಕ್ಷಿಗಳಿಗೆ ತೆರೆದುಕೊಂಡಿದೆ.


ನಿರಂತರ ತರಗತಿಗಳು, ಕಾಲಕಾಲಕ್ಕೆ ಪರೀಕ್ಷೆಗಳನ್ನು ಏರ್ಪಡಿಸುವುದು ಅಂತೆಯೇ ನಿತ್ಯ ಸಿಎ ಸಂಬಂಧಿ ಪಠ್ಯಕಾರ್ಯಗಳನ್ನು ವಿದ್ಯಾರ್ಥಿಗಳಿಂದ ಮಾಡಿಸುವ ಮೂಲಕ ಸಿಎ ಯನ್ನು ಒಂದು ರೀತಿಯ ತಪಸ್ಸಿನಂತೆ ಕೈಗೆತ್ತಿಕೊಳ್ಳಲು ಅಂಬಿಕಾ ಮಹಾವಿದ್ಯಾಲಯ ವೇದಿಕೆ ಸೃಷ್ಟಿಸಿದೆ. ಸಂಸ್ಥೆಯ ಈ ಪ್ರಯತ್ನಕ್ಕೆ ಈಗಾಗಲೇ ಯಶಸ್ಸುಗಳೂ ದೊರೆಯಲಾರಂಭಿಸಿವೆ ಎಂಬುದು ಸಂಸ್ಥೆಗೆ ಮತ್ತಷ್ಟು ಪ್ರೇರಣೆಯನ್ನೊದಗಿಸಿದೆ.
ಈ ನಡುವೆ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲೂ ವಾಣಿಜ್ಯ ವಿದ್ಯಾರ್ಥಿಗಳಿಗೆ ಸಿಎ ಕೋಚಿಂಗ್ ನಡೆಸುತ್ತಿರುವುದರಿಂದ ಹತ್ತನೆಯ ನಂತರ ಅನೇಕ ವಿದ್ಯಾರ್ಥಿಗಳು ದಾಖಲಾತಿ ಮಾಡಿಸಿಕೊಳ್ಳುತ್ತಿದ್ದಾರೆ. ಒಟ್ಟು 9 ಮಂದಿ ವಿದ್ಯಾರ್ಥಿಗಳು ಸಿಎ ಫೌಂಡೇಶನ್ ಪರೀಕ್ಷೆಯನ್ನು ತೇರ್ಗಡೆ ಹೊಂದಿದರೆ ಮೂವರು ವಿದ್ಯಾರ್ಥಿಗಳು ಗ್ರೂಪ್ 1 ಹಾಗೂ 2 ಪರೀಕ್ಷೆಗಳನ್ನು ಹಾಗೂ ಇಬ್ಬರು ವಿದ್ಯಾರ್ಥಿನಿಯರು ಫೌಂಡೇಶನ್ ಹಾಗೂ ಗ್ರೂಪ್ 1 ಪರೀಕ್ಷೆ ತೇರ್ಗಡೆ ಹೊಂದಿದ್ದಾರೆ. ಇದು ಅಂಬಿಕಾ ವಿದ್ಯಾಸಂಸ್ಥೆಗಳ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯೆನಿಸಿದೆ.


ವಿದ್ಯಾರ್ಥಿನಿಯರಾದ ಸ್ವರ್ಣಾ ಶೆಣೈ, ತೇಜಸ್ವಿನಿ ಸಿಎ ಹಾಗೂ ವಿದ್ಯಾರ್ಥಿ ಮನೀಶ್ ಬಿ.ಎಸ್ ಫೌಂಡೇಶನ್ ಹಾಗೂ ಗ್ರೂಪ್ 1 ಹಾಗೂ 2 ಪರೀಕ್ಷೆಗಳನ್ನು ತೇರ್ಗಡೆ ಹೊಂದಿ ಈಗ ಆರ್ಟಿಕಲ್‌ಶಿಪ್ ನಡೆಸುತ್ತಿದ್ದರೆ ಜಸ್ಮಿತಾ ಕಾಯರ್ಗ, ಶರಣ್ಯಾ ಎ. ರೈ ಫೌಂಡೇಶನ್ ಹಾಗೂ ಗ್ರೂಪ್ 1 ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿ ಅನ್ಮಯ್ ಭಟ್, ವಿದ್ಯಾರ್ಥಿನಿಯರಾದ ರಂಜಿತಾ ಕೆ, ಸಿಂಚನಾ, ನಾಗರತ್ನಾ ಎ ಕಿಣಿ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮುಂದಿನ ಹಂತಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.


ಐಬಿಪಿಎಸ್ ಕೋಚಿಂಗ್: ಬ್ಯಾಂಕ್‌ಗಳಲ್ಲಿ ಉದ್ಯೋಗ ಪಡೆಯಬೇಕೆಂಬುದು ಅನೇಕ ಮಂದಿಯ ಗುರಿಯಾಗಿರುತ್ತದೆ. ಇಂದು ಹೆಚ್ಚಿನ ಬ್ಯಾಂಕ್ ಗಳಲ್ಲಿ ಉದ್ಯೋಗ ಪಡೆಯುವುದಕ್ಕೆ ಐಬಿಪಿಎಸ್ ಪರೀಕ್ಷೆ ತೇರ್ಗಡೆಯಾಗುವುದು ಅನಿವಾರ್ಯ. ಆದರೆ ಐಬಿಪಿಎಸ್ ಪರೀಕ್ಷೆ ಸಂಬಂಧಿ ತರಬೇತಿ ಕೊಡುವವರು ಮಾತ್ರ ವಿರಳ. ಈ ನೆಲೆಯಲ್ಲಿ ಅಂಬಿಕಾ ಮಹಾವಿದ್ಯಾಲಯ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕಳೆದ ಮೂರು ವರ್ಷಗಳಿಂದ ಐಬಿಪಿಎಸ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ರೂಪಿಸುತ್ತಿದೆ. ಮೊದಲ ಬ್ಯಾಚ್ ವಿದ್ಯಾರ್ಥಿಗಳು ಪ್ರಸ್ತುತ ವರ್ಷ ಬ್ಯಾಂಕಿಂಗ್ ಪರೀಕ್ಷೆ ಎದುರಿಸಲಿದ್ದಾರೆ.


ಪ್ರತಿನಿತ್ಯ ಚಟುವಟಿಕೆ, ಬ್ಯಾಂಕಿಂಗ್ ಮಾಹಿತಿ, ಸಾಕಷ್ಟು ಪ್ರಶ್ನೋತ್ತರ ವಿವರಗಳು ಹೀಗೆ ನಾನಾ ನೆಲೆಯಿಂದ ವಿದ್ಯಾರ್ಥಿಗಳನ್ನು ಬ್ಯಾಂಕಿಂಗ್ ಪರೀಕ್ಷೆಗೆ ಅಣಿಗೊಳಿಸಕಲಾಗುತ್ತಿದೆ. ಹೀಗೆ ಅತ್ಯಂತ ಮುತುವರ್ಜಿಯಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವುದು ವಿದ್ಯಾರ್ಥಿಗಳಿಗೆ ಖುಷಿ ತರುತ್ತಿದೆ.
ಒಟ್ಟಿನಲ್ಲಿ ಅಂಬಿಕಾ ಮಹಾವಿದ್ಯಾಲಯ ಕೇವಲ ಪದವಿಯನ್ನಷ್ಟೇ ಗುರಿಯಲ್ಲಿರಿಸಿಕೊಳ್ಳದೆ ಅದರೊಂದಿಗೆ ಸಿಎ, ಐಬಿಪಿಎಸ್ ನಂತಹ ಪರೀಕ್ಷೆಗಳಿಗೂ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿರುವುದರಿಂದ ಅನೇಕ ಹೆತ್ತವರು ಹಾಗೂ ವಿದ್ಯಾರ್ಥಿಗಳು ಅಂಬಿಕಾ ಮಹಾವಿದ್ಯಾಲಯವನ್ನೇ ತಮ್ಮ ಆಯ್ಕೆಯ ಕಾಲೇಜಾಗಿ ಗುರುತಿಸುವುದಕ್ಕೆ ಕಾರಣವಾಗುತ್ತಿದೆ. ಜತೆಗೆ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿಯೇ ಅಂಬಿಕಾ ಹೆಸರುವಾಸಿಯಾಗುತ್ತಿದೆ.

LEAVE A REPLY

Please enter your comment!
Please enter your name here