ಕ್ಲ್ಯಾಪ್ ಅಕಾಡೆಮಿ ಆಯೋಜನೆ…
ಅಧಿಕ ಅಂಕವುಳ್ಳ ವಿದ್ಯಾರ್ಥಿಗೆ ಸಿಗಲಿದೆ ಉಚಿತ ತರಬೇತಿ…
ಕಳೆದ ಸಾಲಿನಲ್ಲಿ ಕೆ.ಸಿಇಟಿ ಮತ್ತು ನೀಟ್ ತರಬೇತಿ ಪಡೆದ ವಿದ್ಯಾರ್ಥಿಗಳ ಪಿಯುಸಿಯ ಅತ್ಯುತ್ತಮ ಸಾಧನೆಗೆ ಕ್ಲ್ಯಾಪ್ ಜೊತೆಗೆ ಅಭಿನಂದನೆ ಸಲ್ಲಿಸಿದ ಸಂಸ್ಥೆ…
ಪುತ್ತೂರು: ಎಪಿಎಂಸಿ ರಸ್ತೆ ,ಮನೈ ಆರ್ಕ್ ಸಂಕೀರ್ಣ ಇದರ ಎರಡನೇ ಮಹಡಿಯಲ್ಲಿ ಕಾರ್ಯಚರಿಸುತ್ತಿರುವ ಕ್ಲ್ಯಾಪ್ ಅಕಾಡೆಮಿಯೂ ನೂತನ ಸಾಲಿಗೆ ಕೆ.ಸಿಇಟಿ ಹಾಗೂ ನೀಟ್ ಪರೀಕ್ಷಾ ತರಬೇತಿ ಪ್ರಾರಂಭಿಸಲಿದೆ.
ಕಳೆದ ಸಾಲಿನಲ್ಲಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳಾದ ಕೆ-ಸಿಇಟಿ ಮತ್ತು ನೀಟ್ ಪರೀಕ್ಷೆ ಗೆ ಹಾಜರಾದ ದ್ವಿತೀಯ ಪಿಯು ನ 25 ವಿದ್ಯಾರ್ಥಿಗಳು ಕೂಡ ಪಿಯುನಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದು , ಕ್ಲ್ಯಾಪ್ ಅಕಾಡೆಮಿ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿ, ಬೆನ್ನು ತಟ್ಟಿದೆ.
ಅದೇ ರೀತಿಯಲ್ಲಿ ನೂತನ ಸಾಲಿಗೆ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಸೇವೆಯ ಪ್ರವೇಶ ಪರೀಕ್ಷೆ ಎದುರಿಸೋ ಆಸಕ್ತ ವಿದ್ಯಾರ್ಥಿಗಳಿಗೆ ಮೇ.10 ರಿಂದ ಕೆ.ಸಿಇಟಿ ಹಾಗೂ ನೀಟ್ ಪರೀಕ್ಷಾ ತರಬೇತಿಯನ್ನು ಪ್ರಾರಂಭಿಸಲು” ಕ್ಲ್ಯಾಪ್ ಅಕಾಡೆಮಿ ‘ ಪುತ್ತೂರಿನಲ್ಲಿ ಮುಂದೆ ಬಂದಿದ್ದು ,ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅವಕಾಶವೊಂದನ್ನು ನೀಡಿದೆ. ಇಷ್ಟಲ್ಲದೇ ಅತ್ಯಾಧಿಕ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ಸಂಸ್ಥೆ ಘೋಷಣೆ ಮಾಡಿದೆ.
ಬೋಧನೆಯಲ್ಲಿ ಸುಮಾರು 15 ವರುಷಗಳಿಗೂ ಮಿಕ್ಕಿದ ಅನುಭವಿ ಭೋಧಕ ವರ್ಗವನ್ನೂ ಹೊಂದಿರುವ ಸಂಸ್ಥೆ, ಕಳೆದ ಸಾಲಿನ SSLC ಪರೀಕ್ಷೇಯಲ್ಲಿ ಅತ್ಯಾಧಿಕ ಅಂಕ ಗಳಿಸಿರುವಂಥ ಮಕ್ಕಳಿಗೆ ಮೇಲಿನ ವಿಷಯದಲ್ಲಿ ,ಯಾವುದೇ ಶುಲ್ಕವಿಲ್ಲದೇ ಸಂಪೂರ್ಣ ಉಚಿತ ತರಬೇತಿಯನ್ನು ಕೂಡ ನೀಡಿತ್ತು.ಕೋರ್ಸ್ ಸೇರ ಬಯಸುವ , ಆಸಕ್ತಿಯುಳ್ಳ ವಿದ್ಯಾರ್ಥಿಗಳು ಕೂಡಲೇ ಅಕಾಡೆಮಿಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಅಧಿಕ ಅಂಕವುಳ್ಳ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ.
ಮೇ .10 ರಿಂದ ತರಗತಿಗಳು ಆರಂಭ.
ನುರಿತ ಶಿಕ್ಷಕರ ತಂಡದಿಂದ ಭೋಧನೆ.
ಅಧಿಕ ಮಾಹಿತಿಗಾಗಿ ಸಂಪರ್ಕಿಸಿ :6360775494.