ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ಪೆರಣಬೈಲು ಅನಿಲದಲ್ಲಿ ನೂತನವಾಗಿ ನಿರ್ಮಿಸಿರುವ ಆರೂಢದಲ್ಲಿ ಶ್ರೀ ವನದುರ್ಗಾದೇವಿಯ ಪ್ರತಿಷ್ಠೆ ಮೇ.5ರಂದು ಬೆಳಿಗ್ಗೆ ತಂತ್ರಿ ಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಕೆಮ್ಮಿಂಜೆ ಇವರ ಮಾರ್ಗದರ್ಶನದಲ್ಲಿ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ಬಡೆಕಿಲ್ಲಾಯರ ನೇತೃತ್ವದಲ್ಲಿ ನಡೆಯಿತು.
ಅನಿಲ ಕುಟುಂಬಸ್ಥರಿಗೆ ಕಂಡುಬಂದ ದೋಷ ಪರಿಹಾರಾರ್ಥವಾಗಿ ದೈವಜ್ಞರಾದ ದಿನೇಶ್ ಪಣಿಕ್ಕರ್ ಸೋಮೇಶ್ವರ ಇವರ ನೇತೃತ್ವದಲ್ಲಿ ನಡೆದ ತಾಂಬೂಲ ಪ್ರಶ್ನೆ ಚಿಂತನೆಯಲ್ಲಿ ಅನಿಲದಲ್ಲಿ ಈ ಪರಿಸರಕ್ಕೆ ಸಂಬಂಧಪಟ್ಟ ಶ್ರೀ ದೇವಿ ಸಾನಿಧ್ಯವಿರುವುದಾಗಿ ಕಂಡುಬಂದಿತ್ತು. ಪರಿಸರದ ಎಲ್ಲಾ ಭಕ್ತರ ಕೂಡುವಿಕೆಯಲ್ಲಿ ಪ್ರತಿಷ್ಟಾದಿ ಕಾರ್ಯ ಮಾಡಿದಲ್ಲಿ ಎಲ್ಲರಿಗೂ ಶ್ರೀ ದೇವಿಯ ಅನುಗ್ರಹ ಪ್ರಾಪ್ತಿಯಾಗಲಿದೆ ಎಂದು ಕಂಡುಬಂದಿತ್ತು. ಅದರಂತೆ ಇಲ್ಲಿ ಆರೂಢ ನಿರ್ಮಿಸಲಾಗಿತ್ತು. ನೂತನ ಆರೂಢದಲ್ಲಿ ಮೇ.4ರಂದು ದೇವತಾ ಪ್ರಾರ್ಥನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದು ಮೇ.5ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಪ್ರತಿಷ್ಟಾ ಪ್ರಧಾನ ಹೋಮ, ಪಂಚವಿಂಶತಿ ಕಲಶಾರಾಧನೆ ನಡೆಯಿತು. ಬಳಿಕ 10.27ರ ಮಿಥುನ ಲಗ್ನದಲ್ಲಿ ಶ್ರೀ ವನದುರ್ಗಾ ದೇವಿಯ ಪದ್ಮಶಿಲಾ ಪ್ರತಿಷ್ಠೆ,ಪ್ರತಿಷ್ಠಾ ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಪ್ರಸನ್ನ ಪೂಜೆ ನಡೆಯಿತು. ಮಧ್ಯಾಹ್ನ ಮಹಾ ಮಂಗಳಾರತಿ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು.
ನೋಣಯ್ಯ ಗೌಡ ಅನಿಲ, ಎ.ಎಸ್.ಶೇಖರ ಗೌಡ ಅನಿಲ, ಕುಶಾಲಪ್ಪ ಗೌಡ ಅನಿಲ, ವಿಶ್ವನಾಥ ಗೌಡ ಪೆರಣಗುತ್ತು, ವೆಂಕಪ್ಪ ಗೌಡ ಡೆಬ್ಬೇಲಿ, ನೋಣಯ್ಯ ಗೌಡ ಡೆಬ್ಬೇಲಿ, ಕಮಲಾಕ್ಷ ಪಂಡಿತ್, ಧರ್ಣಪ್ಪ ಗೌಡ ನಾವುಳೆ, ಗೋಪಾಲ ಗೌಡ ಕುದ್ಕೋಳಿ, ಪುರುಷೋತ್ತಮ ಗೌಡ ಕುದ್ಕೋಳಿ, ಶ್ರೀಮತಿ ಭದ್ರಾವತಿ ಕಾಯರ್ತಡ್ಕ, ನಾರಾಯಣ ಗೌಡ ಅನಂತಾಡಿ, ಭಾರತಿ ಅನಂತಾಡಿ, ಯಶವಂತ ರೆಖ್ಯ. ಭಾಗೀರಥಿ ರೆಖ್ಯ, ನಾರಾಯಣ ಆಚಾರ್ಯ ಅನಿಲ, ಸತೀಶ್ ರೈ ಕೊಣಾಲುಗುತ್ತು, ರವಿಪ್ರಸಾದ್ ಶೆಟ್ಟಿ ರಾಮನಗರ, ರವಿಚಂದ್ರ ಹೊಸವೊಕ್ಲು, ರಾಧಾಕೃಷ್ಣ ಕೆರ್ನಡ್ಕ, ಸುಂದರ ಗೌಡ ಅತ್ರಿಜಾಲು ಸೇರಿದಂತೆ ಅನಿಲ ಕುಟುಂಬಸ್ಥರು, ಪೆರಣಬೈಲು ಗ್ರಾಮಸ್ಥರು ಪಾಲ್ಗೊಂಡಿದ್ದರು.