ರಾಮಕುಂಜ: ಪುತ್ತೂರಿನಿಂದ ಕೇರಳದ ಚೆರ್ಕಳಕ್ಕೆ ಕೇರಳ ರಾಜ್ಯ ಮಲಬಾರ್ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಉರಿಮಜಲಿನಲ್ಲಿರುವ ಇಡ್ಕಿದು ಸೊಸೈಟಿ ಮುಂಭಾಗ ತಲುಪಿದಾಗ ಬಸ್ಸಿನ ಗಾಜು ಒಡೆದು ರಾಮಕುಂಜ ಗ್ರಾಮದ ಆತೂರಿನ ಇಬ್ಬರು ಬಾಲಕರು ಗಾಯಗೊಂಡು ಆಸ್ಪತ್ರಗೆ ದಾಖಲಾಗಿರುವ ಘಟನೆ ಮೇ.4ರಂದು ಮಧ್ಯಾಹ್ನ ನಡೆದಿದೆ.
ರಾಮಕುಂಜ ಗ್ರಾಮದ ಆತೂರು ನಿವಾಸಿ ಅಬ್ದುಲ್ ಹಮೀದ್ ಮತ್ತು ಝೀನತ್ ದಂಪತಿಯ ಪುತ್ರರಾದ ಮೊಹಮ್ಮದ್ ಮಾಝೀನ್(7ವ.)ಹಾಗೂ ಅಹಮ್ಮದ್ ಮುಝಮ್ಮಿಲ್(10ವ.)ಗಾಯಗೊಂಡವರಾಗಿದ್ದಾರೆ. ಅಬ್ದುಲ್ ಹಮೀದ್ ಹಾಗೂ ಝೀನತ್ ದಂಪತಿ ತಮ್ಮ ಮೂವರು ಮಕ್ಕಳೊಂದಿಗೆ ಕೇರಳದ ಚೆರ್ಕಳ
ನಲ್ಲಿಕಟ್ಟೆಯಲ್ಲಿರುವ ಸಂಬಂಧಿಕರ ಮನೆಗೆ ಹೋಗುವರೇ ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಕೇರಳ ರಾಜ್ಯದ ಮಲಬಾರ್ ಬಸ್(ಕೆಎಲ್ 15 ಎ 0023)ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಸ್ಸು ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಉರಿಮಜಲಿನ ಇಡ್ಕಿದು ಸೊಸೈಟಿ ಮುಂಭಾಗ ತಲುಪಿದಾಗ ಬಸ್ಸಿನ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದ್ದರಿಂದ ಬಸ್ಸಿನ ಗಾಜು ಒಡೆದಿದೆ. ಪರಿಣಾಮ ಬಸ್ಸಿನ ಎದುರು ಸೀಟಿನಲ್ಲಿ ಕುಳಿತ್ತಿದ್ದ ಬಾಲಕ ಮೊಹಮ್ಮದ್ ಮಾಝೀನ್ರವರ ಮುಖಕ್ಕೆ ಗಾಜಿನ ಹುಡಿ ತಾಗಿ ಮೂಗಿಗೆ ಮತ್ತು ಹಣೆಗೆ ಗಾಯವಾಗಿದೆ. ಇನ್ನೋರ್ವ ಬಾಲಕ ಅಹಮ್ಮದ್ ಮುಝಮ್ಮಿಲ್ರವರ ಕಾಲಿಗೆ ಸಣ್ಣ ಪುಟ್ಟ ಗಾಯವಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಪುತ್ತೂರು ಪ್ರಗತಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಮ್ಸಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.