ಕಡಬ: ಕೋಡಿಂಬಾಳ ಗ್ರಾಮದ ಮಜ್ಜಾರು ಎಂಬಲ್ಲಿ ಕುಮಾರಧಾರ ನದಿಯಿಂದ ರಾಜರೋಷವಾಗಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ಕಡಬ ಪೊಲೀಸರು ವಶಕ್ಕೆ ಪಡೆದ ಘಟನೆ ಮಾ.6 ರಾತ್ರಿ ನಡೆದಿದೆ.
ಪೊಲೀಸರು ಆಗಮಿಸುತ್ತಿರುವ ಮಾಹಿತಿ ತಿಳಿದು ಮರಳು ದಂಧೆಕೋರರು ಪಿಕಾಪ್ ನಲ್ಲಿದ್ದ ಮರಳನ್ನು ಗೌಪ್ಯ ಸ್ಥಳದಲ್ಲಿ ಖಾಲಿ ಮಾಡಿದ್ದಾರೆ. ಇನ್ನು ಬೈಕ್ ನಲ್ಲಿ ಯುವಕ ತಂಡ ಅಕ್ರಮ ಮರಳು ಸಾಗಾಟಕ್ಕೆ ನೆರವಾಗಿದ್ದು ಪೊಲೀಸರು ಬರುವ ಭಯದಲ್ಲಿ ದಂಧೆಕೋರರಿಗೆ ಮಾಹಿತಿ ರವಾನಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಪಂಜ ಮೂಲದ ಪಿಕಪ್ ಚಾಲಕನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಎಸ್.ಐ ಅಭಿನಂದನ್ ಎ.ಎಸ್.ಐ ಸುರೇಶ್ ನೇತೃತ್ವದ ತಂಡ ಭೇಟಿ ನೀಡಿದ ವೇಳೆ ಮರಳು ರಾಶಿ ಮಾಡಿ ಇಟ್ಟಿರುವುದು ಕಂಡು ಬಂದಿದೆ.