ಎಸ್.ಎಸ್.ಎಲ್.ಸಿ ಫಲಿತಾಂಶ- ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರಕ್ಕೆ ದ್ವಿತೀಯ ಬಾರಿಗೆ ಶೇ.100 ಫಲಿತಾಂಶ

0

ಪುತ್ತೂರು: 2023-24ನೇ ಸಾಲಿನ ಎಸ್ಎಸ್ಏಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರಕ್ಕೆ ಸತತ ಎರಡನೇ ಬಾರಿಗೆ ಶೇ.100 ಫಲಿತಾಂಶ ಬಂದಿದೆ.
ಶಾಲೆಯಿಂದ ಒಟ್ಟು 18 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ ಮೋಕ್ಷಿತ್ ಪಿ.ಎಸ್ 614 ಅಂಕಗಳೊಂದಿಗೆ ಶೇ.98.24 ಪಡೆದುಕೊಂಡಿದ್ದಾರೆ. ಉಳಿದಂತೆ 9 ಮಂದಿ ವಿಶೇಷ ಶ್ರೇಣಿ ಹಾಗೂ 9 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here