ರಾಮಕುಂಜ: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಶೇ.99.33 ಫಲಿತಾಂಶ ಲಭಿಸಿದೆ.
ಸಂಸ್ಥೆಯಿAದ 149 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 148 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.99.33 ಫಲಿತಾಂಶ ಬಂದಿದೆ. 30 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್) ತೇರ್ಗಡೆ ಹೊಂದಿದ್ದಾರೆ. 84 ವಿದ್ಯಾರ್ಥಿಗಳು ಪ್ರಥಮ, 18 ವಿದ್ಯಾರ್ಥಿಗಳು ದ್ವಿತೀಯ, 16 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿತೇರ್ಗಡೆ ಹೊಂದಿದ್ದಾರೆ. ಆದಿತ್ಯ ಪಿ.(602), ರೂಪಶ್ರೀ (595), ಯಶಸ್ವಿನಿ (592), ಯಜ್ಝ (590), ಶ್ರವಣ್ (587), ರಮ್ಯ ಜೆ.ಎನ್ (580), ಅನುಶ್ರೀ ಉಡುಪ ಆರ್ (572), ಪ್ರಣಾಮ್ ಕೆ(570), ರಶ್ಮಿ ಎಂ.ವಿ (568), ಹೆಚ್. ಪವನ್‌ಕೃಷ್ಣ (567), ಚೈತ್ರ (562), ಹಿತೇಶ್ (560), ಡಿ.ಎಲ್ ಮಧುರ (555), ಪ್ರೇಕ್ಷಿತ್ ಕೆ (564), ಸಿಂಚನ (553), ಜಾಹ್ನವಿ ಕೆ(551), ಶ್ರೀಹಸ್ತ (551), ನಿಖಿಲ್ ಎನ್.ಡಿ (550), ರ‍್ಯ ರೈ (548), ಆದಿತ್ಯ ಕೆ.ಪಿ (547), ಪ್ರಣಮ್ಯ ಎ(547), ಅನನ್ಯ ಎ.(546), ಕೌಸಲ್ಯ ಬಿ.ಗೌಡ (546), ನಿತೇಶ್ (546), ಕುಶಿ ಬಿ.ಎಸ್ (539), ಮಹಮ್ಮದ್ ಶಾಕೀರ್ (535), ಅನ್ವೇಶ್ (534), ಪ್ರಜ್ವಿತಾ ಕೆ(534), ಕೃಪಾ (533), ಶ್ರೇಯಾ ಎಂ (532) ಅವರು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ. ಶಾಲೆಗೆ ಪರೀಕ್ಷಾ ಮಂಡಳಿಯಿಂದ ಫಲಿತಾಂಶದ ಆಧಾರದಲ್ಲಿ ಗ್ರೇಡ್ ಎ ಮಾನ್ಯತೆಯು ದೊರಕಿದೆ.