ಎಸ್‌ಎಸ್‌ಎಲ್‌ಸಿ: ನೆಲ್ಯಾಡಿ ಸಂತಜಾರ್ಜ್ ಪ್ರೌಢಶಾಲೆ ಆಂಗ್ಲ ಮಾಧ್ಯಮಕ್ಕೆ ಶೇ.100 ಫಲಿತಾಂಶ

0

ನೆಲ್ಯಾಡಿ: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಪ್ರೌಢಶಾಲಾ ಆಂಗ್ಲಮಾಧ್ಯಮ ವಿಭಾಗಕ್ಕೆ ಶೇ.100 ತೇರ್ಗಡೆ ಫಲಿತಾಂಶ ಬಂದಿದೆ.
ಆAಗ್ಲ ಮಾಧ್ಯಮ ವಿಭಾಗದಲ್ಲಿ ಪರೀಕ್ಷೆ ಬರೆದ 65 ವಿದ್ಯಾರ್ಥಿಗಳೂ ತೇರ್ಗಡೆಗೊಂಡಿದ್ದು ಶೇ.100 ಫಲಿತಾಂಶ ಬಂದಿದೆ. 9 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ, 46 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ ಇಬ್ಬರು ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಅನಘ ಕೆ 614, ಮನ್ವಿತ 587, ಆಯಿಷತ್ ಫಾಹಿಮ 579, ಅನುಶ್ರೀ ಪಿ ನಾಯರ್ 563, ಪ್ರಜ್ಞಾ ಕೆ.ಪಿ.558, ತನ್ಮಯ್ ಕೆ 550, ದಿವೀಶ್ ಡಿ 542, ಫಾತಿಮತ್ ಶಮಾ 540 ಹಾಗೂ ಆಯಿಷಾ ರಫೀಯಾ 538 ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here