ಶಾಂತಿಮೊಗರು: ಕಿಂಡಿ ಅಣೆಕಟ್ಟಿನಲ್ಲಿ ನೀರು ಸೋರಿಕೆ ತಡೆಯುವಂತೆ ಆಗ್ರಹಿಸಿ ಪ್ರತಿಭಟನೆ

0

ಕಿಡಿಗೇಡಿಗಳ ಕೃತ್ಯದಿಂದ ಬರಿದಾದ ಕುಮಾರಧಾರ ನದಿ – ಬೇಸಿಗೆಯಲ್ಲಿ ಅಣೆಕಟ್ಟಿಗೆ ಹಲಗೆ ಜೋಡಣೆ ವಿಳಂಬದ ವಿರುದ್ದವೂ ಗ್ರಾಮಸ್ಥರ ಆಕ್ರೋಶ
ಪ್ರತಿಭಟನಾ ಸ್ಥಳಕ್ಕೆ ಕಡಬ ತಹಶೀಲ್ದಾರ್ ಭೇಟಿ
ಒಂದು ವಾರದೊಳಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಲು ಕ್ರಮ- ತಹಶೀಲ್ದಾರ್ ಪ್ರಭಾಕರ್ ಖಜೂರೆ

ಕಾಣಿಯೂರು: ಕುದ್ಮಾರು ಶಾಂತಿಮೊಗರು ಸೇತುವೆ ಸಮೀಪ ಕುಮಾರಧಾರ ನದಿಗೆ ಅಣೆಕಟ್ಟಿಗೆ ಕಿಡಿಗೇಡಿಗಳ ಕೃತ್ಯದಿಂದಾಗಿ ನದಿ ಬರಿದಾಗಿದೆ. ಸಮಯಕ್ಕೆ ಸರಿಯಾಗಿ ಹಲಗೆ ಜೋಡಣೆ ಮಾಡದೇ ಕೃಷಿಕರಿಗೆ ಅನ್ಯಾಯ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಸ್ಥರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿ ಶಾಂತಿಮೊಗರು ಸೇತುವೆ ಬಳಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆ ಮೇ 10ರಂದು ನಡೆದಿದೆ.

ಸುಮಾರು 7.5 ಕೋಟಿ ರೂ ಗಳಲ್ಲಿ ಪಶ್ಚಿಮವಾಹಿನಿ ಯೋಜನೆಯಲ್ಲಿ ನಿರ್ಮಾಣವಾಗಿರುವ ಕಿಂಡಿ ಅಣೆಕಟ್ಟು ಕಿಡಿಗೇಡಿಗಳ ಕೃತ್ಯದಿಂದಾಗಿ ನದಿ ಬರಿದಾಗಿದೆ. ಕಳೆದ ಬಾರಿಯೂ ಅಣೆಕಟ್ಟಿಗೆ ಹಲಗೆ ಜೋಡಿಸುವ ಕಾರ್ಯ ವಿಳಂಬವಾದದ್ದರಿಂದ ಕೃಷಿಕರಿಗೆ ಬಹಳ ಅನಾನುಕೂಲವಾಗಿತ್ತು. ಈ ವರ್ಷವೂ ಕಿಂಡಿ ಅಣೆಕಟ್ಟಿನ ಸೋರುವಿಕೆಯಿಂದಾಗಿ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ.
ಸಂಬಂಧಪಟ್ಟ ಅಧಿಕಾರಿಗಳು ಜನರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಬೇಕೆಂದು ಪ್ರತಿಭಟನೆಯಲ್ಲಿ ಸಾರ್ವಜನಿಕರು ಆಗ್ರಹಿಸಿದರು. ಶಾಂತಿಮೊಗರು ಸೇತುವೆಯ ಬಳಿ ಸೇರಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಕೆಲವು ಪ್ರಮುಖರು ಮಾತನಾಡಿದರು. ಬಳಿಕ ಕೆಲ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.

ಸ್ಥಳಕ್ಕೆ ಬಂದ ಕಡಬ ತಹಶೀಲ್ದಾರ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವುದಾಗಿ ಹೇಳಿದರೂ ಪ್ರತಿಭಟನಾಕಾರರು ತಕ್ಷಣ ಕ್ರಮಕೈಗೊಂಡು ಸರಿಪಡಿಸಿಕೊಡುವಂತೆ ಆಗ್ರಹಿಸಿದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯ ರೂಪ ತೀವೃಸ್ವರೂಪ ಪಡೆಯಲಿದೆ ಎಂದು ಹೇಳಿದರು. ಮುಂದಿನ ವಾರದೊಳಗೆ ಸಂಬಂದಪಟ್ಟವರ ಸಭೆ ಕರೆದು ನೀರು ಸೋರಿಕೆ ದುರಸ್ತಿಪಡಿಸಲಾಗುವುದು ಎಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

LEAVE A REPLY

Please enter your comment!
Please enter your name here