ದರ್ಬೆಯಲ್ಲಿ ಎಂ.ಸಂಜೀವ ಶೆಟ್ಟಿ ಜವುಳಿ ಮಳಿಗೆಯ 5ನೇ ಶಾಖೆ ಉದ್ಘಾಟನೆ

0

ಪುತ್ತೂರು: ಜವುಳಿ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿರುವುದಲ್ಲದೆ ಕಳೆದ ಸುಮಾರು 80 ವರ್ಷಗಳಿಂದ ವಸ್ತ್ರ ಪರಂಪರೆಯನ್ನು ಹೊಂದಿರುವ ಪುತ್ತೂರಿನ ಪ್ರತಿಷ್ಠಿತ ಜವುಳಿ ಮಳಿಗೆ ಎಂ.ಸಂಜೀವ ಶೆಟ್ಟಿ ಸಿಲ್ಕ್ ರೆಡಿಮೇಡ್ಸ್‌ನವರ ನೂತನ ಶಾಖೆ ’ ಎಂ ಸಂಜೀವ ಶೆಟ್ಟಿ ಸಾರೀಸ್ ಆಂಡ್ ರೆಡಿಮೇಡ್ಸ್’ ಮೇ.10ರಂದು ಉದ್ಘಾಟನೆಗೊಂಡಿತು.

ಪುತ್ತೂರು, ಮಂಗಳೂರು ಸೇರಿದಂತೆ ಇದೀಗ 5ನೇ ಶಾಖೆಯಾಗಿ ದರ್ಬೆಯಲ್ಲಿ ನೂತನ ಜವುಳಿ ಉದ್ಯಮ ಆರಂಭಗೊಂಡಿದ್ದು, ಕಳೆದ ವರ್ಷ ಡ್ರೆಸ್ ಮತ್ತು ಇತರ ವಸ್ತುಗಳ ಎಕ್ಸ್‌ಕ್ಲೂಸಿವ್ ಮಳಿಗೆ ಎಂಎಸ್‌ಎಸ್ ಆಲ್ ಎಕ್ಸ್‌ಕ್ಲೂಸಿವ್ ಉದ್ಘಾಟನೆಗೊಂಡಿತ್ತು. ಇದೀಗ ಪುತ್ತೂರಿನಲ್ಲಿ ನಾಲ್ಕನೆ ಶಾಖೆಯಾಗಿ ಜಿಲ್ಲೆಯಲ್ಲಿ 5ನೇ ಶಾಖೆಯಾಗಿರುವ ದರ್ಬೆ ಮಳಿಗೆಯನ್ನು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ ಉದ್ಘಾಟಿಸಿದರು. 1944ನೇ ಇಸವಿಯಲ್ಲಿ ಸಂಜೀವ ಶೆಟ್ಟಿ ಜವುಳಿ ಮಳಿಗೆ ಉದ್ಘಾಟನೆಯ ಸಂದರ್ಭ ಹುಟ್ಟಿದ 80 ವರ್ಷ ಪ್ರಾಯದ ಸಂಜೀವ ಶೆಟ್ಟಿ ಕುಟುಂಬದ ಹಿರಿಯರಾದ ಸತೀಶ್ ಕುಮಾರ್ ಅವರು ನೂತನ ಮಳಿಗೆಯಲ್ಲಿ ದೀಪ ಪ್ರಜ್ವಲಿಸಿದರು. ಪೊಪ್ಯುಲರ್ ಸ್ವೀಟ್ಸ್ ಮ್ಹಾಲಕ ನರಸಿಂಹ ಕಾಮತ್, ಕೆ.ವಿ.ಶೆಣೈ ಪೆಟ್ರೋಲ್ ಬಂಕ್ ಮಾಲಕ ವಿಶ್ವಾಸ್ ಶೆಣೈ, ಸಂಜೀವ ಶೆಟ್ಟಿಯವರ ಹಿರಿಯ ಪುತ್ರ ಮುರಳಿಧರ ಶೆಟ್ಟಿ, ಕವನ್ ನಾೖಕ್, ಪತ್ನಿ ಶ್ವೇತಾ‌ ಕವನ್ ನಾೖಕ್, ತಾಯಿ ಸುಮತಿ, ದಿ.ಸಂಜೀವ ಶೆಟ್ಟಿಯವರ ಸೊಸೆಯಂದಿರು ದೀಪ ಪ್ರಜ್ವಲಿಸಿದರು.


ಸಂಜೀವ ಶೆಟ್ಟಿ ಮಂಗಳೂರು, ಬೆಂಗಳೂರಿನಲ್ಲೂ ಮನೆಮಾತಾಗಿದೆ:
ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ ಅವರು ಮಾತನಾಡಿ ವ್ಯಾಪಾರ ಅಂದರೆ ಹುಡುಗಾಟಿಕೆ ಅಲ್ಲ ಎಂದು ನನಗೆ ಮಾರ್ಗದರ್ಶನ ಮಾಡಿದವರು ಸಂಜೀವ ಶೆಟ್ಟಿ ಕುಟುಂಬದ ಹಿರಿಯರು. ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ನನಗೆ ಉತ್ತಮ ಬಾಂಧವ್ಯ ಬೆಳೆದಿತ್ತು. ಇವತ್ತು 80 ವರ್ಷದ ಇತಿಹಾಸದಲ್ಲಿ ಸಂಜೀವ ಶೆಟ್ಟಿ ಜವುಳಿ ಉದ್ಯಮ ಸಹಸ್ರಚಂದ್ರ ದರ್ಶನ ಮಾಡಿದಂತಾಗಿದೆ. ನನ್ನ ಮನೆ ಮಂದಿ ಎಲ್ಲಾ ಶುಭ ಕಾರ್ಯಗಳಿಗೂ ಇಲ್ಲಿಂದಲೇ ಬಟ್ಟೆಗಳನ್ನು ಖರೀದಿ ಮಾಡಿದ್ದು, ಇವತ್ತು ಮಂಗಳೂರು, ಬೆಂಗಳೂರಿನಲ್ಲೂ ಸಂಜೀವ ಶೆಟ್ಟಿ ಜವುಳಿ ಮಳಿಗೆ ಮನೆ ಮಾತಾಗಿದೆ. ಯಾವುದೇ ಒಂದು ವ್ಯಾಪಾರದಲ್ಲಿ ಅವರ ಮಕ್ಕಳು ತೊಡಗಿಕೊಳ್ಳಬೇಕು. ಈ ರೀತಿ ತೊಡಗಿಕೊಂಡ ವ್ಯವಸ್ಥೆ ಸಂಜೀವ ಶೆಟ್ಟಿ ಕುಟುಂಬದಲ್ಲಿ ಕಾಣಸಿಗುತ್ತದೆ. ಇಂತಹ ಫ್ಯಾಮಿಲಿ ಪುಣ್ಯದ ಕಾರ್ಯ ಮಾಡುತ್ತಿದೆ ಎಂದರು.

ಸಂಜೀವ ಶೆಟ್ಟಿ ಮಳಿಗೆಯಿಂದ ದರ್ಬೆಯ ಬ್ಯೂಟಿಪಿಕೇಶನ್ ಆಗಿದೆ:
ಕೆ.ವಿ.ಶೆಣೈ ಪೆಟ್ರೋಲ್ ಪಂಪ್ ಮಾಲಕ ವಿಶ್ವಾಸ್ ಶೆಣೈ ಮಾತನಾಡಿ ನಾವು ಸಣ್ಣವರಾಗಿರವಾಗ ಇಲ್ಲಿ ವಾಣಿ ವಿಳಾಸ, ಪ್ರಶಾಂತ್ ಸಹಿತ ಇತರ ಬೆರಳೆಣಿಕೆ ದೊಡ್ಡ ಕಟ್ಟಡವಿತ್ತು. ಇತ್ತೀಚಿಗಿನ ದಿನದಲ್ಲಿ ಬೇರೆ ಬೇರೆ ದೊಡ್ಡ ಕಟ್ಟಡ ಬಂದಿದೆ. ಇವತ್ತು ಸಂಜೀವ ಶೆಟ್ಟಿ ಮಳಿಗೆಯಿಂದ ವಸ್ತ್ರದ ಬ್ಯೂಟಿಪೀಕೇಶನ್ ಜೊತೆ ದರ್ಬೆಯ ಬ್ಯೂಟಿಪಿಕೇಶನ್ ಆಗ್ತಾ ಇದೆ ಎಂದು ಹೇಳಿದರು.

ಮುಂದಿನ ವರ್ಷ ಇನ್ನೊಂದು ಮಳಿಗೆ ಆರಂಭವಾಗಲಿ:
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಪುತ್ತೂರನ್ನು ಹತ್ತೂರಿಗೆ ಪರಿಚಯಿಸಿದ ಹಿರಿಯ ಮುತ್ಸದಿ ಸಂಜೀವ ಶೆಟ್ಟಿಯವರು ತಮ್ಮದೇ ಚಾಪನ್ನು ಮೂಡಿಸಿದ್ದಾರೆ. ಸಮಯ ಪ್ರಜ್ಞೆಯಿಂದ ವ್ಯಾಪಾರ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರೀತಿ ವಿಶ್ವಾಸಗಳಿಸಿದ್ದಾರೆ. ಜವುಳಿ ಉದ್ಯಮ ಮತ್ತಷ್ಟು ವಿಸ್ತರಿಸಿ ಆಧುನಿಕ ಯುಗದಲ್ಲೂ ಯುವ ಪೀಳಿಗೆಗೆ ಬೇಕಾದ ರೀತಿಯಲ್ಲಿ ಮಳಿಗೆಯಲ್ಲಿ ಸೌಲಭ್ಯ ಒದಗಿಸಲಾಗಿದೆ. ಅಕ್ಷಯ ತೃತೀಯ ದಿನ ಲೋಕಾರ್ಪಣೆಯಾಗಿದೆ. ಮುಂದಿನ ವರ್ಷ ಇನ್ನೊಂದು ಮಳೆಗೆ ಆರಂಭವಾಗಲಿ ಎಂದರು. ಬಟ್ಟೆಯನ್ನು ವಿತರಣೆ ಮಾಡುವ ಬಾಂಬೆಯ ಚೋಪ್ರ ಮಾತನಾಡಿ ಸುಮಾರು 25 ವರ್ಷದಿಂದ ಸಂಸ್ಥೆಯ ಜೊತೆಗಿನ ಒಡನಾಟವನ್ನು ತಿಳಿಸಿದರು.

ಕಾಲಕ್ಕೆ ತಕ್ಕಂತೆ ಅಪ್‌ಡೇಡ್ ಅಗತ್ಯ:
ಸಂಜೀವ ಶೆಟ್ಟಿಯವರ ಹಿರಿಯ ಪುತ್ರ ಮುರಳೀಧರ ಶೆಟ್ಟಿಯವರು ಸ್ವಾಗತಿಸಿ ಮಾತನಾಡಿ ಜವುಳಿ ಉದ್ಯಮದಲ್ಲಿ ಸಂಜೀವ ಶೆಟ್ಟಿಯ ಪರಂಪರೆಯ ಬಗ್ಗೆ ಎಲ್ಲರಿಗೂ ಚಿರಪರಿಚಿತ. 80 ವರ್ಷಗಳಿಂದ ನಿರಂತರವಾಗಿ ಜವುಳಿ ಉದ್ಯಮದಲ್ಲಿ ತೊಡಗಿಸಿ ಎಲ್ಲಾ ಆಗುಹೋಗುಗಳನ್ನು ಅನುಭವಿಸಿದವರು. ಇಂತಹ ಸಂದರ್ಭ ಈ ಕಾಲಗಟ್ಟದಲ್ಲಿ ಹೊಸ ಸಂಸ್ಥೆ ಅಗತ್ಯ. ಕಾಲಕ್ಕೆ ತಕ್ಕಂತೆ ನಿರಂತರ ಅಪ್‌ಡೇಟ್ ಅಗತ್ಯ. ಇದನ್ನು ನನ್ನ ತಂದೆಯವರ ಕಾಲದಿಂದಲೂ ಮಾಡಿಕೊಂಡು ಬರಲಾಗಿದೆ. ಪುತ್ತೂರಿಗೆ ಏರ್‌ಕಂಡೀಷನ್ ಪರಿಚಯ ಮಾಡಿದ್ದು ನನ್ನ ತಂದೆ. ಇವತ್ತು ಬಟ್ಟೆ ವ್ಯಾಪಾರದಲ್ಲಿ ಬಹಳ ರಿಸ್ಕ್ ಇದೆ. ನಮಗೆ ಅದು ಕರಗತವಾಗಿದೆ. ಹಾಗಾಗಿ ಇನ್ನೊಂದು ರಿಸ್ಕ್ ತೆಗೆದುಕೊಂಡು ದರ್ಬೆಯಲ್ಲಿ ಹೊಸ ಶಾಖೆ ಆರಂಭಿಸಿದ್ದೇವೆ. ಇದು ಪ್ರಗತಿ ಹೊಂದಲು ಗ್ರಾಹಕರ ಸಹಕಾರ ಅಗತ್ಯ. ದೇವರ ದಯೆಯಿಂದ ನಿರಂತರವಾಗಿ ನಾವು ನಂಬಿದ ಕೆಲಸ ಆಗುತ್ತಿದೆ ಎಂದರು. ಸಿಬ್ಬಂದಿ ಸಹನ ಪ್ರಾರ್ಥಿಸಿದರು. ಶ್ರೀಮ ಕಾರ್ಯಕ್ರಮ ನಿರೂಪಿಸಿದರು. ಜಿ.ಎಲ್.ಆಚಾರ್ಯ ಜ್ಯುವೆಲ್ಸರ‍್ಸ್‌ನ ಮಾಲಕ ಬಲರಾಮ ಆಚಾರ್ಯ ಮತ್ತು ರಾಜಿ ಬಲರಾಮ ಆಚಾರ್ಯ, ಹಿಮ ರೆಫ್ರಿಜರೇಶನ್‌ನ ಮಾಲಕ ರಾಜೇಶ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜಾರಾಮ್, ಯುವರಾಜ್ ಪೆರಿಯತ್ತೋಡಿ, ವಸಂತ ವೀರಮಂಗಲ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಸಂಜೀವ ಶೆಟ್ಟಿ ಕುಟುಂಬಸ್ಥರಾದ ಗಿರಿಧರ್, ಮನೋಹರ್, ಶಿವಶಂಕರ್, ಸೂರಜ್, ಕೀರ್ತನ್, ನರೇಂದ್ರ, ಮಹೇಂದ್ರ, ನಮೃತಾ, ಡಾ.ಲಿಖಿತಾ, ಡಾ.ಹರಿಣಿ, ರಜನಿ, ವಿದ್ಯಾ, ಇಂದು ಹಾಗೂ ಅಶ್ವಿತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here