ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರತಿಷ್ಠಿತ ತಂಪು ಪಾನೀಯ ತಯಾರಿಕ ಸಂಸ್ಥೆಯಾಗಿರುವ ಬಿಂದು ಫ್ಯಾಕ್ಟರಿಯ ಎಲ್ಲಾ ಉತ್ಪನ್ನಗಳು ಒಂದೇ ಸೂರಿನಡಿಯಲ್ಲಿ ದೊರೆಯುವ ಬಿಂದುವಿನ 7ನೇ ಫ್ಯಾಕ್ಟರಿ ಔಟ್ಲೆಟ್ ಬೆಂಗಳೂರಿನ ಬನಶಂಕರಿಯಲ್ಲಿ ಮೇ.5ರಂದು ಶುಭಾರಂಭಗೊಂಡಿತು. ಮೇಘಾ ಫ್ರೂಟ್ ಪ್ರೊಸೆಸಿಂಗ್ ಲಿಮಿಟೆಡ್ನ ನಿರ್ದೇಶಕಿ ಮೇಘಾ ಶಂಕರ್ರವರು ಔಟ್ಲೆಟ್ನ್ನು ಉದ್ಘಾಟಿಸಿದರು.
ಸಂಸ್ಥೆಯ ಸಿಇಓ ಸುಶಿಲ್ ವೈದ್ಯ ಮಾತನಾಡಿ ಗ್ರಾಹಕರ ಮೆಚ್ಚಿನ ಭಾರತೀಯ ಶೈಲಿಯ ತಿನಿಸು ಮತ್ತು ಪಾನೀಯಗಳು ಒಂದೇ ಸೂರಿನಡಿ ಲಭ್ಯ. ಬಿಂದು ಉತ್ಪನ್ನಗಳಾದ ಸಂಸ್ಕರಿಸಲ್ಪಟ್ಟ ನೀರು, ಸೋಡಾ ಮತ್ತು ಏರೇಟೆಡ್ ಪಾನೀಯಗಳು, ಸಿಪ್ ಆನ್, ಫಿಝ್ ರಹಿತವಾದ ಹಣ್ಣಿನ ಮೂಲದ ಪಾನೀಯ, ಫ್ರೂಝಾನ್ ಬ್ರಾಂಡ್ನ ಫಿಝ್ ಸಹಿತವಾದ ಹಣ್ಣಿನ ಮೂಲದ ಪಾನೀಯ, ಸ್ನ್ಯಾಕ್ ಅಪ್ ಬ್ರಾಂಡ್ನ ಸ್ನ್ಯಾಕ್ಸ್, ಕುರುಕಲು ಚಿಪ್ಸ್ ಇತ್ಯಾದಿ ಸುಮಾರು 50ಕ್ಕೂ ಅಧಿಕ ಸ್ವದೇಶಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ದಕ್ಷಿಣ ಭಾರತದಾದ್ಯಂತ ಸುಮಾರು 5 ಲಕ್ಷಕ್ಕೂ ಅಧಿಕ ಮಳಿಗೆಗಳಲ್ಲಿ ಬಿಂದು ಉತ್ಪನ್ನಗಳು ಲಭ್ಯವಿದೆ.
ಕರ್ನಾಟಕದಲ್ಲಿ 50 ಫ್ಯಾಕ್ಟರಿ ಔಟ್ಲೆಟ್ಗಳನ್ನು ಈ ಒಂದು ವರ್ಷದಲ್ಲಿ ಆರಂಭಗೊಳಿಸುವ ಯೋಜನೆಯನ್ನು ಹಮ್ಮಿಕೊಂಡಿದೆ.ಮುಂಬರುವ 5 ವರ್ಷಗಳಲ್ಲಿ 500 ಫ್ಯಾಕ್ಟರಿ ಔಟ್ಲೆಟ್ಗಳನ್ನು ಆರಂಭಿಸುವ ಯೋಜನೆಯನ್ನು ಹೊಂದಿದೆ. ಇದರಿಂದ ಸಮಾಜದಲ್ಲಿ ಉದ್ಯೋಗವಕಾಶ ದೊರೆಯಲಿದೆ ಎಂದು ಹೇಳಿದರು.
ಮೇಘಾ ಫ್ರೂಟ್ ಪ್ರೊಸೆಸಿಂಗ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು ಎಲ್ಲಾ ರಾಜ್ಯಗಳಲ್ಲಿ ಫ್ಯಾಕ್ಟರಿ ಔಟ್ಲೆಟ್ಗಳನ್ನು ಆರಂಭಿಸುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎಂದು ಹೇಳಿದರು. ನಮ್ಮ ಎಲ್ಲಾ ಉತ್ಪನ್ನಗಳು ಬಿಂದು ಫ್ಯಾಕ್ಟರಿ ಔಟ್ಲೆಟ್ನಲ್ಲಿ ಒಂದೇ ಸೂರಿನಡಿಯಲ್ಲಿ ದೊರೆಯಲಿದೆ ಎಂದರು. ಹಾಗೂ ಸಂಸ್ಥೆಯ ಸಿಇಓ ಸುಶಿಲ್ ವೈದ್ಯರವರು ಪ್ರಥಮ ಖರೀದಿ ಮಾಡಿದರು.
ಮೇಘಾ ಫ್ರೂಟ್ ಪ್ರೊಸೆಸಿಂಗ್ ಲಿಮಿಟೆಡ್ನ ನಿರ್ದೇಶಕರಾದ ಮನಸ್ವಿತ್ ಶಂಕರ್, ನ್ಯಾಷನಲ್ ಕಮರ್ಷಿಯಲ್ ಬ್ರ್ಯಾಂಡಿಂಗ್ ಮ್ಯಾನೇಜರ್ ಹರಿಪ್ರಸಾದ್, ಬಿಸಿನೆಸ್ ಹೆಡ್ ದೇವರಾಜ್ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.