ಬಿಜೆಪಿಯ ಕಾರ್ಯಕರ್ತರು, ನಾಯಕರು ಕೈಗೆ ಬಳೆತೊಟ್ಟು ಕುಳಿತಿಲ್ಲ, ಇಂತಹ ವ್ಯಕ್ತಿಗಳನ್ನು ಧೂಳಿಪಟ ಮಾಡುವ ಶಕ್ತಿ ನಮಗಿದೆ -ಹರಿಕೃಷ್ಣ ಬಂಟ್ವಾಳ ಎಚ್ಚರಿಕೆ
ಪುತ್ತೂರು:ಮಾಜಿ ಶಾಸಕ ಸಂಜೀವ ಮಠಂದೂರು ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಚೇರಿಯಲ್ಲಿ ತುರ್ತು ಸಭೆ ನಡೆದು. ಆರೋಪಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗಳ್ಳುವಂತೆ ಪುತ್ತೂರು ನಗರ ಠಾಣೆಗೆ ಮನವಿ ನೀಡಲಾಯಿತು.
ಪುತ್ತೂರು ನಗರ ಠಾಣೆಗೆ ಮನವಿ ನೀಡಿ ಮಾತನಾಡಿದ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳರವರು ಮಾಜಿ ಶಾಸಕ ಸಂಜೀವ ಮಠಂದೂರು ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಕೆಟ್ಟ ಶಬ್ಧಗಳಿಂದ ಬೈದು ಮಾನಹಾನಿಗೆ ಯತ್ನ ಮಾಡಲಾಗಿದೆ. ಶಾಸಕ ಅಶೋಕ್ ರೈ ಜೊತೆಗಾರ, ರೌಡಿ ಶೀಟರ್ ಪ್ರಜ್ವಲ್ ರೈರವರು ಸಂಜೀವ ಮಠಂದೂರು ಅವರಿಗೆ ಮಾನಹಾನಿ ಮಾಡಿದ್ದಾರೆ. ಅದು ಅವರಿಗೆ ಮಾಡಿದ ಮಾನಹಾನಿಯಲ್ಲ, ಅದು ಬಿಜೆಪಿಗೆ ಮಾಡಿದ ಅವಮಾನ. ಇಂತಹ ವ್ಯಕ್ತಿಗಳನ್ನ ಎದುರಿಸುವುದು ಬಿಜೆಪಿಗೆ ದೊಡ್ಡ ವಿಷಯವಲ್ಲ. ಇವರನ್ನು ಧೂಳಿಪಟ ಮಾಡುವ ಶಕ್ತಿ ನಮಗಿದೆ ಎಂದರು. ಬಿಜೆಪಿಯ ಕಾರ್ಯಕರ್ತರು, ನಾಯಕರು ಕೈಗೆ ಬಳೆತೊಟ್ಟು ಕುಳಿತಿಲ್ಲ. ನಿಮ್ಮ ಬಗ್ಗೆ ಬೀದಿಯಲ್ಲಿ ಏನು ತೋರಿಸಬೇಕಾ ಅದನ್ನ ತೋರಿಸಲು ನಮಗೆ ತಾಕತ್ತಿದೆ. ನೀತಿ ಸಂಹಿತೆ ಹಿನ್ನಲೆಯಲ್ಲಿ ಮೌನವಾಗಿ ನಾವು ಮನವಿಯನ್ನ ನೀಡಿದ್ದೇವೆ ಎಂದರು. ಆರೋಪಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನೀತಿ ಸಂಹಿತೆ ಮುಗಿದ ಬಳಿಕ ಮುಂದಿನ ಕ್ರಮವನ್ನು ತಿರ್ಮಾನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಭಾವುಕರಾದ ಮಠಂದೂರು:
ಮನವಿ ನೀಡುವ ಆರಂಭದಲ್ಲಿ ಬಿಜೆಪಿ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಸಂಜೀವ ಮಠಂದೂರು ಮಾತನಾಡಿ ನಾನು ಕಾಯಕರ್ತನಾಗಿ ಬೆಳೆದಿದ್ದೇನೆ. ಶಾಸಕನ ಕುಮ್ಮಕ್ಕಿನಿಂದ ಇಂತಹ ಕೆಲಸ ಮಾಡಲಾಗಿದೆ. ಗೂಂಡಾಗಿರಿಯ ಪ್ರವೃತ್ತಿ ಮತ್ತೆ ಪುತ್ತೂರಿನಲ್ಲಿ ಆರಂಭವಾಗಿದೆ. ಗೂಂಡಾಗಿರಿಯನ್ನು ಮಟ್ಟ ಹಾಕಬೇಕು ಇದರ ಬಗ್ಗೆ ನಾವು ಹೋರಾಟ ಮಾಡುತ್ತೇವೆ. ಡಿಜಿ ಐಜಿ ಯವರೆಗೂ ನಾವು ಹೋಗುತ್ತೆವೆ ಎಂದರು. ಶಾಸಕರು ಮಾತನಾಡುವ ವೇಳೆ ಭಾವುಕರಾಗಿ ಕಣ್ಣೀರು ಹಾಕಿದ ಘಟನೆಯೂ ನಡೆಯಿತು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಪ್ರಾಸ್ತಾವಿಕ ಮಾತನಾಡಿದು. ಬಿಜೆಪಿ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಪಿ.ಜಿ ಜಗನ್ನಿವಾಸ ರಾವ್, ಬೂಡಿಯಾರ್ ರಾಧಕೃಷ್ಣ ರೈ, ರಾಧಕೃಷ್ಣ ಬೋರ್ಕರ್ ಸೇರಿದಂತೆ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.