ಪುತ್ತೂರು: ಪಶುಪಾಲನ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆಯಿಂದ 2024-25ನೇ ಸಾಲಿನ ಮೈಸೂರಿನ ಪಿಂಜಿರಾಪೋಲ್ ಮತ್ತು ಇತರೆ ಗೋಶಾಲೆಗಳಿಗೆ ಬೆಂಬಲ ಕಾರ್ಯಕ್ರಮದಡಿಯಲ್ಲಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪುತ್ತೂರು ತಾಲೂಕಿನಲ್ಲಿ ಕನಿಷ್ಠ 50 ಜಾನುವಾರುಗಳನ್ನು ನಿರ್ವಹಣೆ ಮಾಡುತ್ತಿರುವ, ಮೇವು ಉತ್ಪಾದನೆಗೆ ಅವಶ್ಯಕ 2.0 ಹೆಕ್ಟೇರು ಜಮೀನು ಹೊಂದಿರುವ ಹಾಗೂ ಸಂಸ್ಥೆ ನೋಂದಾವಣೆಯಾಗಿ ಕನಿಷ್ಠ ಒಂದು ವರ್ಷ ಪೂರೈಸಿರುವ ಗೋಶಾಲೆಯವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಭರ್ತಿ ಮಾಡಿದ ಅರ್ಜಿಯನ್ನು ಪೂರಕ ದಾಖಲಾತಿಗಳೊಂದಿಗೆ ಮೇ.31ರ ಒಳಗಾಗಿ ಸ್ಥಳೀಯ ಪಶುವೈದ್ಯ ಅಧಿಕಾರಿಯವರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಪಶುವೈದ್ಯಾಧಿಕಾರಿಯವರನ್ನು ಸಂಪರ್ಕಿಸುವಂತೆ ಪುತ್ತೂರು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.