ಪುತ್ತೂರು: ಹಾರಾಡಿ ರಾಮ್ ಲೀಲಾ ಆರ್ಕೆಡ್ ನಲ್ಲಿ ವಿದ್ಯಾರ್ಥಿಗಳ ‘ಡ್ರಾಮಾ ಡ್ರೀಮ್ ‘ ರಂಗ ಶಿಕ್ಷಣ ತರಗತಿಗಳು ಪ್ರಾರಂಭಗೊಳ್ಳಲಿದ್ದು, ಪುತ್ತೂರು ಪರಿಸರದ ಪ್ರತಿಭಾ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ ಇದಾಗಿದೆ. 48 ತರಗತಿಗಳ ಪೌರಾಣಿಕ, ಜಾನಪದ, ಐತಿಹಾಸಿಕ ವಿಷಯಗಳ ನಾಟಕ ತರಬೇತಿ ಇದಾಗಿದ್ದು, ಪ್ರತಿ ಶನಿವಾರ ಮತ್ತು ಆದಿತ್ಯವಾರ ವಿದ್ಯಾರ್ಥಿಗಳ ಅನುಕೂಲತೆಗಾಗಿ ಬ್ಯಾಚ್ ಮುಖೇನ ಕ್ಲಾಸ್ ನಡೆಯಲಿದೆ.
ರಂಗ ಶಿಕ್ಷಣ ಪಡೆದ ಪದವೀಧರರಿಂದ ರಂಗ ತರಬೇತಿ ನೀಡಲಾಗುವುದು. ತರಗತಿಯಲ್ಲಿ ತಯಾರಾದ ರಂಗ ಕಾವ್ಯವನ್ನು ರಾಜ್ಯ ಮಟ್ಟದ ನಾಟಕೋತ್ಸವ ಕಾರ್ಯಕ್ರಮ ಆಯೋಜಿಸಿ ಪ್ರದರ್ಶನ ನೀಡಲಾಗುವುದು. ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.ಅಲ್ಲದೆ ಡ್ರಾಮಾ ವಿದ್ಯಾರ್ಥಿಗಳಿಗಾಗಿ ಸಾಮಾನ್ಯ ಜ್ಞಾನ ಪರೀಕ್ಷೆ, ಇನ್ನಿತರ ಸಾಂಸ್ಕೃತಿಕ ಸ್ಪರ್ಧೆ ಗಳನ್ನ ಏರ್ಪಡಿಸಲಾಗುವುದು.
ಮೇ.26ರಿಂದ ವಿದ್ಯಾರ್ಥಿಗಳ ದಾಖಲಾತಿ ನಿಗದಿಪಡಿಸಿದ್ದು, ಏಳು ವರ್ಷ ಮೇಲ್ಪಟ್ಟ ಅಭಿನಯದಲ್ಲಿ ಆಸಕ್ತ ಇರುವ ಪ್ರತಿಭೆಗಳು ದಾಖಲಾಗಬಹುದು. ಒಂದು ಬ್ಯಾಚ್ ನಲ್ಲಿ ಹನ್ನೆರಡು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಹೆಚ್ಚಿನ ಮಾಹಿತಿಗೆ ಕಚೇರಿಯ 9686714517 ಈ ನಂಬರನ್ನು ಸಂಪರ್ಕಿಸಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.