ಕುಂತೂರುಪದವು: ಕಣ್ಣಿನ ಉಚಿತ ತಪಾಸಣಾ ಶಿಬಿರ

0

ಕಡಬ: ಕುಂತೂರುಪದವು ಹಾಲು ಉತ್ಪಾದಕರ ಸಹಕಾರ ಸಂಘದ ಸಹಭಾಗಿತ್ವದಲ್ಲಿ ನ್ಯೂ ವಿಷನ್ ಜನರೇಷನ್ ಪ್ರೋಗ್ರಾಮ್ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ(ಅಂಧತ್ವ ವಿಭಾಗ) ಇವರ ಜಂಟಿ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಮೇ.19ರಂದು ಕುಂತೂರು ಪದವು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆಯಿತು.


ಕುಂತೂರು ಪದವು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ.ಸೋಮಪ್ಪ ಗೌಡ ಅವರು ಶಿಬಿರ ಉದ್ಘಾಟಿಸಿದರು. ನ್ಯೂ ವಿಷನ್ ಜನರೇಷನ್ ಪ್ರೋಗ್ರಾಮ್ ಮೇನೇಜರ್ ರಾಮಚಂದ್ರ ಅವರು ಅಂಧತ್ವ(ಕಣ್ಣಿನ) ಬಗ್ಗೆ ಮಾಹಿತಿ ನೀಡಿದರು. ಕುಂತೂರು ಪದವು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ವಿ.ಎಂ.ತೋಮಸ್, ರಾಮಯ್ಯ ಗೌಡ ಬೈಲಡ್ಕ-ಬಲ್ಯ, ಸುರೇಶ್ ಗೌಡ ಇಡಾಳ, ವಸಂತ ಗೌಡ ಕೆದ್ದೊಟೆ, ದಿನಕರ ಭಟ್ ಮೇರುಗುಡ್ಡೆ, ಕಾರ್ಯನಿರ್ವಾಹಣಾಧಿಕಾರಿ ನೀಲಯ್ಯ ಗೌಡ, ನಿವೃತ್ತ ಕಾರ್ಯನಿರ್ವಾಹಣಾಧಿಕಾರಿ ಮಂಜಪ್ಪ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಬಿ.ಪದ್ಮನಾಭ ಗೌಡ ಎರ್ಮಾಳ ನಿರೂಪಿಸಿದರು. ಸಂಘದ ಸಿಬ್ಬಂದಿಗಳಾದ ಶ್ರೇಯಸ್, ಧನಂಜಯ ಅತ್ರಿಜಾಲು ಸಹಕರಿಸಿದರು. ಸುಮಾರು 80 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.

LEAVE A REPLY

Please enter your comment!
Please enter your name here