ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ಒಡ್ಯ ಶಾಲಾ ವಿದ್ಯಾರ್ಥಿನಿ ಲಾವಣ್ಯ.ಕೆ ತೇರ್ಗಡೆ

0

ನಿಡ್ಪಳ್ಳಿ; ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಒಡ್ಯ ಇಲ್ಲಿಯ ವಿದ್ಯಾರ್ಥಿನಿ ಲಾವಣ್ಯ. ಕೆ  2023-24 ನೇ ಸಾಲಿನ ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ  ಉತ್ತಮ ಶ್ರೇಣಿ ಪಡೆದು ಸ್ಕಾಲರ್ ಶಿಪ್ ಗೆ ಆಯ್ಕೆ ಯಾಗಿದ್ದಾಳೆ ಎಂದು ಮುಖ್ಯ ಗುರು ಜನಾರ್ದನ ಅಲ್ಚಾರು ತಿಳಿಸಿದ್ದಾರೆ.

        ಇವಳಿಗೆ ಶಿಕ್ಷಕಿಯರಾದ ದಿವ್ಯಾ ಪಡುಬಿದ್ರೆ ಮತ್ತು ರೂಪ ಮಾಹಿಲಕಾನ ಇವರು ತರಬೇತಿ ನೀಡಿದ್ದರು.ಇವಳು ಪಾಣಾಜೆ ಗ್ರಾಮದ ನೀರಮೂಲೆ ದೇವಪ್ಪ ನಾಯ್ಕ ಮತ್ತು ಪದ್ಮಾವತಿ ನೀರಮೂಲೆ ದಂಪತಿ ಪುತ್ರಿ.ಇವಳ ಸಾಧನೆ ಮತ್ತು ಶಾಲೆಗೆ ಹೆಸರು ತಂದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಶಾಲಾ ಶಿಕ್ಷಕರು ಅವಳನ್ನು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here