ಮೇ.23 ರಿಂದ 27ರವರೆಗೆ ಕೂಡು ರಸ್ತೆ ನಿರ್ಮಾಣ ಕಾಮಗಾರಿ-ಬದಲಿ ರಸ್ತೆ ಬಳಸುವಂತೆ ಲೋಕೋಪಯೋಗಿ ಇಲಾಖೆ ಮನವಿ

0

ಪುತ್ತೂರು: ಕಡಬ ತಾಲೂಕಿನ ಸುಳ್ಯ – ಪೈಚಾರು – ಬೆಳ್ಳಾರೆ – ಸವಣೂರು – ಕುದ್ಮಾರು – ಆಲಂಕಾರು – ಸುರುಳಿ – ಮಾದೇರಿ – ಪಟ್ರಮೆ – ಧರ್ಮಸ್ಥಳ – ಮುಂಡಾಜೆ- ನೆಲ್ಯಾಡಿ ರಸ್ತೆಯ ಕುಂಜಾಡಿ ಎಂಬಲ್ಲಿ ಸೇತುವೆಯ ಕೂಡು ರಸ್ತೆ ನಿರ್ಮಾಣ ಕಾಮಗಾರಿಗಾಗಿ ಮೇ.23 ರಿಂದ 27ರವರೆಗೆ (5 ದಿನಗಳು) ಸದ್ರಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಭಂಧಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಾರ್ವಜನಿಕರು ಈ ಸಮಯದಲ್ಲಿ ಮಂಜುನಾಥ ನಗರ- ಅಂಕತ್ತಡ್ಕ-ಬೆಳ್ಳಾರೆ ರಸ್ತೆ, ಬೆಳ್ಳಾರೆ-ನೆಟ್ಟಾರು-ಅಂಕತ್ತಡ್ಕ-ಬಂಬಿಲ-ಸವಣೂರು-ರಸ್ತೆಯನ್ನು ಪರ್ಯಾಯವಾಗಿ ಬಳಸುವಂತೆ ಇಲಾಖೆ ತಿಳಿಸಿದ್ದು, ಸಾರ್ವಜನಿಕರು ತಮ್ಮ ಪ್ರಯಾಣವನ್ನು ಪೂರ್ವೋಪಾಯವಾಗಿ ಯೋಜಿಸಿ ಸಹಕರಿಸುವಂತೆ ವಿನಂತಿಸಿದೆ.

LEAVE A REPLY

Please enter your comment!
Please enter your name here