ನಿವೃತ್ತ ಸೇನಾಧಿಕಾರಿ ಕ್ಯಾ|ಚಿದಾನಂದ ನಾಡಾಜೆ- ಸುಮಿತ್ರ ದಂಪತಿಗಳ ದಾಂಪತ್ಯ ಜೀವನದ ಸುವರ್ಣ ಮಹೋತ್ಸವ

0

ಪುತ್ತೂರು: ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಚಿದಾನಂದ ನಾಡಾಜೆ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಸುಮಿತ್ರ ದಂಪತಿಗಳ ದಾಂಪತ್ಯ ಜೀವನದ ಸುವರ್ಣ ಮಹೋತ್ಸವವು ಮೇ 22 ರಂದು ನರಿಮೊಗರು ಕೊಡಿನೀರು “ಸುಚಿತ” ಇಲ್ಲಿ ಜರಗಿತು.


ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಚಿದಾನಂದ ನಾಡಾಜೆ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಸುಮಿತ್ರ ದಂಪತಿಗಳ ದಾಂಪತ್ಯ ಜೀವನದ ಸುವರ್ಣ ಮಹೋತ್ಸವದ ಪ್ರಯುಕ್ತ ತಮ್ಮ ಆಪ್ತ ಸಂಬಂಧಿಗಳೊಂದಿಗೆ ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ, ಪ್ರಸಾದ ಭೋಜನ ನೆರವೇರಿತು. ಬಳಿಕ ಸುವರ್ಣ ಮಹೋತ್ಸವವನ್ನು ಆಚರಿಸುವ ಕ್ಯಾಪ್ಟನ್ ಚಿದಾನಂದ ನಾಡಾಜೆ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಸುಮಿತ್ರರವರು ಪರಸ್ಪರ ಹಾರ ಹಾಕುವ ಹಾಗೂ ಸಿಹಿಯ ಪ್ರತೀಕವಾದ ಕೇಕ್ ಕತ್ತರಿಸುವ ಮೂಲಕ ವಿವಾಹ ಸಂಭ್ರಮವನ್ನು ವಿಜ್ರಂಭಣೆಯಿಂದ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ವಿವಾಹ ಮಹೋತ್ಸವ ಆಚರಿಸಿದ ಹಿರಿಯ ದಂಪತಿಗಳೊಂದಿಗೆ ಮಕ್ಕಳು, ಮೊಮ್ಮಕ್ಕಳು, ಕುಟುಂಬಸ್ಥರು, ಹಿತೈಷಿಗಳು, ಬಂಧುಮಿತ್ರರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಬಳಿಕ ಮನೋರಂಜನಾ ಕಾರ್ಯಕ್ರಮ ನಡೆದು, ನೆರೆದವರೆಲ್ಲರೂ ಭೋಜನ ಕೂಟದಲ್ಲಿ ಭಾಗಿಗಳಾಗಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.


1947ನೇ, ಆಗಸ್ಟ್ ತಿಂಗಳಲ್ಲಿ ದಿ.ಅಂತಪ್ಪ ಪೂಜಾರಿ ಹಾಗೂ ಶಿವಮ್ಮ ದಂಪತಿ ಪುತ್ರರಾಗಿ ಜನಿಸಿದ ಚಿದಾನಂದ ನಾಡಾಜೆರವರು 1965ರ ಭಾರತ-ಪಾಕಿಸ್ಥಾನ ಯುದ್ಧ ಸಮಯದಲ್ಲಿ ಭಾರತೀಯ ಸೇನೆಯಲ್ಲಿ ಸೇರ್ಪಡೆಗೊಂಡವರು. ಬಳಿಕ ಹಂತ ಹಂತವಾಗಿ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ 1993, ಅಕ್ಟೋಬರ್ ತಿಂಗಳಲ್ಲಿ ಸೇವಾ ನಿವೃತ್ತಿ ಹೊಂದಿದ್ದರು.

LEAVE A REPLY

Please enter your comment!
Please enter your name here