ಕುಂತೂರು: ವಿಘ್ನೇಶ್ವರ ತಂಡದ ಸದಸ್ಯ ಹರಿಪ್ರಸಾದ್ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧನಸಹಾಯ ಹಸ್ತಾಂತರ

0

ನೆಲ್ಯಾಡಿ: ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಡಬ ತಾಲೂಕು ಇದರ ಆಲಂಕಾರು ವಲಯದ ಕುಂತೂರು ಕಾರ್ಯಕ್ಷೇತ್ರದ ವಿಘ್ನೇಶ್ವರ ತಂಡದ ಸದಸ್ಯರಾದ ಹರಿಪ್ರಸಾದ್ ಅವರಿಗೆ ಬೈಕ್ ಅಪಘಾತದಿಂದ ಬಲದ ಕಾಲು ಮತ್ತು ಕೈಗೆ ಪೆಟ್ಟಾಗಿದ್ದು ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕ್ರಿಟಿಕಲ್ ಫಂಡ್ ರೂ.20 ಸಾವಿರ ಧನ ಸಹಾಯ ಮಂಜೂರಾಗಿದ್ದು ಇದರ ಮಂಜೂರಾತಿ ಪತ್ರವನ್ನು ಮೇ.23ರಂದು ವಿತರಿಸಲಾಯಿತು.


ಆಲಂಕಾರು ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಇಂದುಶೇಖರ್ ಶೆಟ್ಟಿ, ಆಲಂಕಾರು ವಲಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಉಮೇಶ್ ಶೆಟ್ಟಿ, ಮಾಜಿ ವಲಯಾಧ್ಯಕ್ಷರಾದ ಬಾಲಕೃಷ್ಣ, ನವಜೀವನ ಸಮಿತಿಯ ಅಧ್ಯಕ್ಷರಾದ ನಾಗಪ್ಪ ಗೌಡ, ಮೇಲ್ವಿಚಾರಕಿ ಯಶೋಧ ಅವರು ಈ ವೇಳೆ ಉಪಸ್ಥಿತರಿದ್ದರು. ಮೇಲ್ವಿಚಾರಕಿ ಯಶೋಧರವರು ಸ್ವಾಗತಿಸಿದರು. ಸೇವಾಪ್ರತಿನಿಧಿ ಸವಿತಾ ವಂದಿಸಿದರು.

LEAVE A REPLY

Please enter your comment!
Please enter your name here