ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಮೇಳೈಸಿದ ಫುಡ್ ಕಾಂಪಿಟೇಶನ್

0

ಪುತ್ತೂರು: ಮರ್ಕಝುಲ್ ಹುದಾ ಪ್ರಥಮ ದರ್ಜೆ ಕಾಲೇಜು ಕುಂಬ್ರ ಇದರ ಪದವಿ ವಿಭಾಗದ ವಿದ್ಯಾರ್ಥಿನಿಯರಿಗೆ ಫುಡ್ ಕಾಂಪಿಟೇಶನ್ ಇತ್ತೀಚೆಗೆ ನಡೆಯಿತು. ಪದವಿ ವಿಭಾಗದ ವಿದ್ಯಾರ್ಥಿನಿಯರ ಒಟ್ಟು ಏಳು ತಂಡಗಳು ಕುಕಿಂಗ್ ವಿದೌಟ್ ಫಯರ್ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ತಂಡಗಳ ಉಸ್ತುವಾರಿಯನ್ನು ಪದವಿ ವಿಭಾಗದ ಉಪನ್ಯಾಸಕಿಯರಾದ ಬಾಸಿಲ ಹಾಗೂ ಸಾಬಿದ ವಹಿಸಿದ್ದರು.


ಸ್ಪರ್ಧೆಯಲ್ಲಿ ಅಂತಿಮ ಬಿ.ಕಾಂ ವಿಭಾಗದ ಖತೀಜಾ ಟೀಂ ಸದಸ್ಯರಾದ ಅನೀಝ, ಆಶಿಕಾ ಬಾನು, ಸಫೀದ, ಫಾಯಿಝಾ, ಸುನೈರ, ಸಲ್ವ, ನಸೀರಾ ಪ್ರಥಮ ಸ್ಥಾನ ಪಡೆದುಕೊಂಡರೆ, ದ್ವಿತೀಯ ಬಿ.ಎ ವಿಭಾಗದ ರಿಶಾನ ಮತ್ತು ಟೀಂ ಸದಸ್ಯರಾದ ಝುಹಾನ, ಮರ್ಝಾನ, ಝಖಿಯ್ಯಾ, ಶಾಹಿದಾ, ಸುಹಾನ, ಮರ್ಝೂಕ, ನಸ್ವೀಹಾ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.
ಶರೀಅತ್ ವಿಭಾಗದ ಮುದರ್ರಿಸ್ ಜಲೀಲ್ ಸಖಾಫಿ, ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾದ ಸಂದ್ಯಾ ಪಿ ಮತ್ತಿತರರು ತೀರ್ಪುಗಾರರಾಗಿ ಸಹಕರಿಸಿದರು. ಮರ್ಕಝುಲ್ ಹುದಾದ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ ಉಪಸ್ಥಿತರಿದ್ದರು.

ಪದವಿ ವಿಭಾಗದ ಉಪನ್ಯಾಸಕಿಯರಾದ ಜುಬೈದಾ, ಪ್ರತಿಭಾ ರೈ, ಕೃಷ್ಣವೇಣಿ, ಶ್ರೀದೇವಿ, ಸುಮನ್, ರೇಶ್ಮ, ಕಾವ್ಯ ಸಹಕರಿಸಿದರು. ಪದವಿ ವಿಭಾಗದ ಪ್ರಾಂಶುಪಾಲರಾದ ಮುಹಮ್ಮದ್ ಮನ್ಸೂರ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here