ಪುತ್ತೂರು:ಸೆಂಟ್ಯಾರು ಪಾಣಾಜೆ ಸಾರ್ವಜನಿಕ ಡಾಮಾರು ರಸ್ತೆಯ ಸಂಟ್ಯಾರು ಬಳಿ ರಸ್ತೆ ಬದಿಯ ಕಚ್ಚಾಮಣ್ಣು ಸ್ಥಳದಲ್ಲಿ ಪಾರ್ಕ್ ಮಾಡಲಾಗಿದ್ದ ದ್ವಿಚಕ್ರ ವಾಹನಗಳಿಗೆ ಕಾರೊಂದು ಡಿಕ್ಕಿಯಾದ ಘಟನೆಗೆ ಸಂಬಂಧಿಸಿ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರಿನಲ್ಲಿ ಬ್ಯೂಟಿಷಿಯನ್ ಆಗಿರುವ ವೀಕ್ಷಿತಾ ಅವರು ನೀಡಿದ ದೂರಿನಂತೆ ಪೊಲೀಸರು ಆರೋಪಿ ಕಾರು ಚಾಲಕ ರೋಹಿತ್ ಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ವೀಕ್ಷಿತಾ ಅವರು ಸ್ಕೂಟರ್ ಪಾರ್ಕ್ ಮಾಡಿ ಪುತ್ತೂರಿಗೆ ತೆರಳಿದ್ದರು.ಸಂಜೆ ಹಿಂದಿರುಗುವ ಸಂದರ್ಭ ತನ್ನ ಸ್ಕೂಟರ್ ಸಹಿತ ಇತರ ಸ್ಕೂಟರ್‌ಗಳಿಗೆ ಕಾರೊಂದು ಡಿಕ್ಕಿಯಾಗಿರುವ ವಿಚಾರ ತಿಳಿದು ಬಂದಿದೆ.ಮೂರು ಡಿಯೋ ಸ್ಕೂಟರ್, ಎರಡು ಸುಜುಕಿ ಕಂಪೆನಿಯ ಸ್ಕೂಟರ್‌ಗಳಿಗೆ ಕಾರು ಅಪಘಾತದಿಂದ ಹಾನಿಯಾಗಿದೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.