ನೆಲ್ಯಾಡಿ: ಶಿಸ್ತು, ಸಂಯಮ, ತಾಳ್ಮೆ ಎಂಬ ಸಹಜತೆಯಿಂದ ಸಮರ್ಪಕರಾದರೆ ಐಟಿಐ ಕಲಿತ ಟೆಕ್ನಿಷಿಯನ್ಸ್ ಸ್ವತಂತ್ರವಾಗಿ ಒಂದು ಕಾರ್ಖಾನೆಯನ್ನು ಮಾಡಲು ಸಾಧ್ಯ. ದೇಶದ ಆರ್ಥಿಕ ಪ್ರಗತಿಗೆ ಕೈಗಾರಿಕೆಗಳ ಪಾತ್ರ ಮತ್ತು ಐಟಿಐ ಕಲಿತ ಟೆಕ್ನಿಷಿಯನ್ಸ್ಗಳ ಕೊಡುಗೆ ಅಪಾರ ಎಂದು ಶ್ರೀ ಕ್ಷೇತ್ರ ಸೌತಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ, ಬೆಂಗಳೂರು ಪೀಣ್ಯದ ಪಿಸಿಎಸ್ ಕಂಪನಿಯ ಅಧ್ಯಕ್ಷ ಹರಿರಾವ್ ಮುಂಡ್ರುಪಾಡಿ ಹೇಳಿದರು.
ಅವರು ನೆಲ್ಯಾಡಿ ಬೆಥನಿ ಐಟಿಐ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ರೆ.ಫಾ.ಜೈಸನ್ ಸೈಮನ್ ಒಐಸಿ ವಹಿಸಿದರು. ರೇ.ಫಾ.ವಿಜೋಯ್ ಪುಕಳಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಚಾರ್ಯ ಸಜಿ ಕೆ ತೋಮಸ್ರವರು ಶೈಕ್ಷಣಿಕ ವರ್ಷದ ವರದಿ ವಾಚಿಸಿದರು. ಮಧುಶ್ರೀ ತಂಡದವರು ಪ್ರಾರ್ಥಿಸಿದರು. ಸಂಸ್ಥೆಯ ತರಬೇತಿ ಅಧಿಕಾರಿ ಜಾನ್ ಪಿ.ಎಸ್ ಸ್ವಾಗತಸಿದರು. ಕಿರಿಯ ತರಬೇತಿ ಅಧಿಕಾರಿ ವರ್ಗೀಸ್ ಎನ್.ಟಿ ವಂದಿಸಿದರು. ಹರಿಪ್ರಸಾದ್ ರೈ ನಿರೂಪಿಸಿದರು.