ಸಾಮಾನ್ಯ ಜ್ಞಾನ ಪರೀಕ್ಷೆ :ಬುರೂಜ್ ಶಾಲಾ ವಿದ್ಯಾರ್ಥಿನಿ ರಾಜ್ಯ ಮಟ್ಟದಲ್ಲಿ ಟಾಪರ್

0

ಪುತ್ತೂರು :ರಾಷ್ಟ್ರ ಮಟ್ಟದ ಇಂಡಿಯನ್ ಟ್ಯಾಲೆಂಟ್ ಒಲಿಂಪಿಯಾಡ್ 2023-24 ನೇ ಸಾಲಿನಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪುಂಜಾಲಕಟ್ಟೆ ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ರಝಾನಗರ ಮೂಡುಪಡುಕೋಡಿ ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿದ್ದು ,ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಮೊದಲ ಸುತ್ತಿನಲ್ಲಿ ಉತ್ತೀರ್ಣಗೊಂಡಿದ್ದಾರೆ ಹಾಗೂ ಎರಡನೇ ಸುತ್ತಿನಲ್ಲಿ ಪ್ರಿಯೋನ ಡಿಯೋರ ಪಿಂಟೊ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ರಾಜ್ಯ ಟಾಪರ್ ಆಗಿ ಹೊರ‌ಹೊಮ್ಮಿರುತ್ತಾರೆ.


ಜೊತೆಗೆ ಇಂಡಿಯನ್ ಟ್ಯಾಲೆಂಟ್ ನಿಂದ ನೀಡಲ್ಪಡುವ ಸ್ಕಾಲರ್ಶಿಪ್ ಗೆ ಆಯ್ಕೆಯಾಗಿರುತ್ತಾರೆ. ಇವರು ಪ್ರವೀಣ್ ಪಿಂಟೊ, ಡೋರಿಸ್ ಸಿಕ್ವೇರಾ ಇವರ ಪುತ್ರಿ. ಜೊತೆಯಲ್ಲಿ ಸ್ಪರ್ಧಿಸಿದ ಪ್ರಾಪ್ತಿ ಜೆ. ಶೆಟ್ಟಿ ಮತ್ತು ಅದ್ವಿತ್ ನಾಯಕ್ ಎಕ್ಸೆಲೆನ್ಸ್ ಮೆಡಲ್ ಅವಾರ್ಡ್ ಗೆ ಭಾಜನರಾಗಿರುತ್ತಾರೆ. ಶಾಲಾ ಸಂಚಾಲಕ ಜನಾಬ್ ಶೇಕ್ ರಹ್ಮತ್ತುಲ್ಲ , ಮುಖ್ಯೋಪಾಧ್ಯಾಯನಿ ಜಯಶ್ರೀ ಬಿ. ಮತ್ತು ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳೂ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here