ಬಿಜೆಪಿ ಕಾರ್ಯಕರ್ತರು ನನ್ನ ಪರವಾಗಿ ಕೆಲಸ ಮಾಡಲಿದ್ದಾರೆ – ರಘುಪತಿ ಭಟ್

0

ಪುತ್ತೂರು: ನಾನು ನೈರುತ್ಯ‌ ಪದವೀಧರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದೇನೆ. ಬಿಜೆಪಿಯಿಂದ ಹಿರಿಯ ಕಾರ್ಯಕರ್ತರಿಗೆ ಪಕ್ಷ ಅವಕಾಶ ನೀಡಲಿಲ್ಲ. ಪರಿವಾರದ ವಿರುದ್ದ ಆದ ಶಾಂತಿಗಾಗಿ ನಡೆದ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಡಾ.ಧನಂಜಯ ಸರ್ಜಿ ಅವರಿಗೆ ನೀಡಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ನನ್ನ‌ ಪರವಾಗಿ‌ ಕೆಲಸ ಮಾಡಲಿದ್ದಾರೆ ಎಂದು ನೈರುತ್ಯ ಪದವೀಧರ ಕ್ಷೇತ್ರದ ಬಂಡಾಯ ಅಭ್ಯರ್ಥಿ, ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಈಗಾಗಲೆ 5 ಜಿಲ್ಲೆ ಮತ್ತು 3 ತಾಲೂಕುಗಳ ಪ್ರವಾಸ ಮಾಡಿ ನಮ್ಮ ಕಾರ್ಯಕರ್ತರನ್ನು ಸಂಪರ್ಕಿಸಿದ್ದೆನೆ. ನಾನು ಎಲ್ಲಾ ಕ್ಷೇತ್ರಕ್ಕೆ ಸಾಧ್ಯವಾದಷ್ಟು ಮಟ್ಟಿಗೆ ಬೇಟಿ ನೀಡಿದ್ದೆನೆ. ಪುತ್ತೂರಿನಲ್ಲಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೆಟಿ ನೀಡಿ ಮತಯಾಚನೆ ಆರಂಭ ಮಾಡಿದ್ದೆನೆ ಎಂದ ಅವರು ಈ ಬಾರಿ ಬಿಜೆಪಿ ಕಾರ್ಯಕರ್ತರು ನನ್ನ ಪರವಾಗಿ ಕೆಲಸ ಮಾಡಲಿದ್ದಾರೆ ಎಂದರು. ನಾನು ಶಾಸಕನಾಗಿ ಮೂರು ಬಾರಿ, ಒಂದು ಬಾರಿ ನಗರಸಭಾ ಸದಸ್ಯನಾಗಿ, ಜನಪ್ರತಿನಿಧಿಯಾಗಿದ್ದ ಸಂದರ್ಭದಲ್ಲಿ ಹಲವಾರು ಕೆಲಸ ಮಾಡಿದ್ದೆನೆ. ಇದನ್ನು ಕರಾವಳಿ ಜನರು ನೆನೆಸಿಕೊಂಡಿದ್ದಾರೆ.


ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಕರಾವಳಿ ಮಾತ್ರವಲ್ಲ, ಮಲೆನಾಡು ಪ್ರದೇಶದಲ್ಲೂ ಉತ್ತಮ ಬೆಂಬಲ ದೊರೆತಿರುವುದು ನನಗೆ ಪ್ಲಸ್ ಪಾಯಿಂಟ್. ಯಾಕೆಂದರೆ ಹಿಂದೆ ಬಿಜೆಪಿ ಮತ್ತು ಕಾಂಗ್ರೆಸ್ ಸ್ಪರ್ಧೆ ಇತ್ತು. ಇವತ್ತು ವ್ಯಕ್ತಿಗಳ ಸಾಧನೆ ಆಧಾರದಲ್ಲಿ ಪರಿವರ್ತನೆ ಆಗಿದೆ. ಆಯನೂರು ಮಂಜುನಾಥ್ ಜೆಡಿಎಸ್ ನಿಂದ ಫಲಾಯನಗೈದು ಕಾಂಗ್ರೆಸ್ ನಲ್ಲಿದ್ದಾರೆ. ಬಿಜೆಪಿಯಲ್ಲಿ ಡಾ.ಧನಂಜಯ ಸರ್ಜಿ ರಾಜಕೀಯ ಕ್ಷೇತ್ರಕ್ಕೆ ಹೊಸಬರು. ಪಕ್ಷಕ್ಕೂ ಹೊಸತು. ಇದು ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧನವಿದೆ. ಹಿಂದೆ ವಿಧಾನಪರಿಷತ್ ಸ್ಥಾನ ಪಕ್ಷದಲ್ಲಿ ಅವಕಾಶ ವಂಚಿತರಿಗೆ ಕೊಡುತ್ತಿದ್ದರು. ಡಾ.ಧನಂಜಯ ಸರ್ಜಿ ಅವರು 2022 ರಲ್ಲಿ ಶಾಂತಿಗಾಗಿ ನಡೆ ಮಾಡಿದ್ದರು. ಇದು ಪರಿವಾರದ ವಿರುದ್ದ ಆದ ಶಾಂತಿಗಾಗಿ ನಡೆ. ಆಗ ಅವರು ಕಾಂಗ್ರೆಸ್ ನಿಂದ ಟಿಕೆಟ್ ಗೆ ಪ್ರಯತ್ನ ಪಟ್ಟಿದ್ದರು‌. ಇವತ್ತು ಬಿಜೆಪಿಯಲ್ಲಿ ಯಾರದಾರೂ ಹಿರಿಯ ಕಾರ್ಯಕರ್ತರಿಗೆ ಕೊಡುತ್ತಿದ್ದರೆ. ಕಾರ್ಯಕರ್ತರು ವಿಚಲಿತರಾಗುತ್ತಿರಲಿಲ್ಲ. ಮೋನಪ್ಪ ಭಂಡಾರಿ, ವಿಕಾಸ್ ಪುತ್ತೂರು ಅವರಿಗೆ ಕೊಡುತ್ತಿದ್ದರೆ ನಾನು ಸ್ಪರ್ಧಿಸುತ್ತಿರಲಿಲ್ಲ. ಇವತ್ತು ಪಕ್ಷದಲ್ಲಿ ಹಿಂದೆ ಇದ್ದ ಪದ್ಧತಿ ಇಲ್ಲದ ಕಾರಣ ಹಿರಿಯರಿಗೆ ಅನ್ಯಾಯವಾಗಿದೆ.‌ಇದು ಶುದ್ದೀಕರಣವಾಗಬೇಕಿದೆ. ವಿಧಾನಪರಿಷತ್ ಸ್ಥಾನ ಪಕ್ಷದ ಕಾರ್ಯಕರ್ತರಿಗೆ ಕೊಡದಿರುವುದು ಒಳ್ಳೆಯ ಲಕ್ಷಣ ಅಲ್ಲ ಎಂದರು.


ಕೆಲಸವನ್ನು ಕ್ರಾಸ್ ಚೆಕ್ ಮಾಡಿ ಮತದಾನ ಮಾಡಿ:
ಪದವೀಧರ ಮತದಾರರು ನಮಗೆ ವಿಧಾನಪರಿಷತ್ ಗೆ ಅವಕಾಶ ಕೊಟ್ಟು ನೋಡಿ. ಈ ಹಿಂದೆ ನಾನು ಶಾಸಕನಾಗಿದ್ದ ಸಮಯದಲ್ಲಿ ಮಾಡಿದ ಕೆಲಸವನ್ನು‌ ಕ್ರಾಸ್ ಚೆಕ್ ಮಾಡಿ ಮತದಾನ ಮಾಡಿ. ನನ್ನನ್ನು ಬಿಜೆಪಿಯವರು ಕರೆಯಲಿ,ಬಿಡಲಿ ನನ್ನ ನಿಲುವು ಬಿಜೆಪಿಯ ಪಕ್ಷದ ಜೊತೆಗೆ. ನಾನು ಬಾಲ್ಯದಿಂದಲೇ ಹಿಂದುತ್ವದ ಕೆಲಸ ಮಾಡಿದವ ಎಂದು ರಘುಪತಿ ಭಟ್ ಹೇಳಿದರು. ರಾಜಾರಾಮ ಭಟ್, ನವೀನ್ ಚಂದ್ರ ಕೆ , ಸಂತೋಷ್ ರಾವ್, ನವೀನ್ ಕುಲಾಲ್, ಸುವರ್ದನ್ ನಾಯಕ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ತಪ್ಪಿಸಿದ್ದು ಯಾರು ನನಗೆ ಗೊತ್ತಿಲ್ಲ
ವಿಧಾನಪರಿಷತ್ ಚುನಾವಣೆಗೆ ಆರಂಭದಲ್ಲಿ ನನ್ನನ್ನು‌ ಕೆಲಸ ಮಾಡಲು ಹೇಳಿದ್ದರು. ಎನ್ ರೋಲ್ ಮಾಡಿ ಆಗುತ್ತದೆ ಎಂದು ಹೇಳಿದರು. ಈ ಕುರಿತು ಹಲವಾರು ಮಂದಿ ಶ್ರಮ ಪಟ್ಟಿದ್ದಾರೆ. ನನಗೆ ಸಂತೋಷ್ ಜಿ ಪರ ಗೌರವವಿದೆ. ನನಗೆ ಅವರು ಸಹಾಯ ಮಾಡಿದ್ದಾರೆ. ಆದರೆ ತಪ್ಪಿಸಿದ್ದು ಯಾರು ನನಗೆ ಗೊತ್ತಿಲ್ಲ. ನನ್ನನ್ನು ಕರೆದು ಈ ಬಾರಿ ಬೇಡ. ನಿನ್ನನ್ನು‌ ಪಕ್ಷದ ಪದಾಧಿಕಾರಿಯಾಗಿ ಮಾಡುತ್ತೇನೆ ಎಂದು ಕರೆದು ಹೇಳಬಹುದಿತ್ತು.‌ ಹಾಗೆ ಮಾಡದ ಕಾರಣ ನಾನು ಇವತ್ತು ಸ್ವತಂತ್ರ ಅಭ್ಯರ್ಥಿಯಾಗಿ ಜನರಲ್ಲಿ ಹೋಗುತ್ತಿರುವುದು.
ನಾನು ಯಾರ ವಿರುದ್ದವೂ ಮಾತನಾಡುವುದಿಲ್ಲ. ನಾನು ವಿಧಾನಪರಿಷತ್ ನಲ್ಲಿ ಕೆಲಸ ಮಾಡಬೇಕು ಅಷ್ಟೆ. ಒಟ್ಟಿನಲ್ಲಿ ಆಯ್ಕೆ ತಪ್ಪಿದ್ದು ಬೇಸರವಲ್ಲ. ಆಯ್ಕೆ ಪ್ರಕ್ರಿಯೆ ಸೂತ್ರಗಳು ಸರಿಯಾಗಿಲ್ಲ.
ರಘುಪತಿ ಭಟ್

ಸಾಧನೆಯನ್ನು ಆಧಾರವಾಗಿಸಿ ಮತಯಾಚನೆ:
ನನಗೆ ಮೋಸ ಆಗಿದೆ ಎಂದು ಮತಯಾಚನೆ ಮಾಡುತ್ತಿಲ್ಲ.‌ ನಾನು ಮತಯಾಚನೆ ಮಾಡುವುದು ನಾನು ಶಾಸಕನಾಗಿ ಮೂರು ಬಾರಿ ಮಾಡಿದ ಅಭಿವೃದ್ದಿ, ಹಿಂದುತ್ವದ ಕಾರ್ಯಕರ್ತರ ಜೊತೆ ಇದ್ದು‌ ಮಾಡಿದ ಕೆಲಸ ಮತ್ತು ಅಭಿವೃದ್ದಿ ಸಾಧನೆಯ ಆಧಾರವಾಗಿ ಮತಯಾಚನೆ ಮಾಡುತ್ತಿದ್ದೇನೆ.
ರಘುಪತಿ ಭಟ್

LEAVE A REPLY

Please enter your comment!
Please enter your name here