ಮಾಣಿ ಕರ್ನಾಟಕ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ – ಉಚಿತ ಪಠ್ಯಪುಸ್ತಕ ವಿತರಣೆ

0

ಒಂದು ದೇಶದ ಶಿಕ್ಷಣ ವ್ಯವಸ್ಥೆ ನಕಲಿಯಾದರೆ ಆ‌ ದೇಶ ಸರ್ವನಾಶವಾದಂತೆ: ಎನ್. ಗಂಗಾಧರ ಆಳ್ವ

ನಲವತೈದು ವರುಷ ತುಂಬಿದ ಈ ಶಾಲೆ ಜಗತ್ತಿಗೆ ಹಲವಾರು ಪ್ರತಿಭಾವಂತರನ್ನು ನೀಡಿದೆ: ಕಿರಣ್ ಹೆಗ್ಡೆ

ವಿಟ್ಲ: ಒಂದು ದೇಶದ ಶಿಕ್ಷಣ ವ್ಯವಸ್ಥೆ ನಕಲಿಯಾದರೆ ಆ‌ ದೇಶ ಸರ್ವನಾಶವಾದಂತೆ ಅದು ಬ್ರಹ್ಮಾಸ್ತ್ರಕ್ಕಿತಲೂ ಬಲಿಷ್ಠ ಎಂದು ತುಂಬೆ ಪ. ಪೂ.ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎನ್. ಗಂಗಾಧರ ಆಳ್ವರವರು ಹೇಳಿದರು.

ಅವರು ಮಾಣಿ ಕರ್ನಾಟಕ ಪ್ರೌಢಶಾಲೆಯಲ್ಲಿ ನಡೆದ 2024-25ನೇ ಸಾಲಿನ ಶಾಲಾ ಪ್ರಾರಂಭೋತ್ಸವ – ಪಠ್ಯಪುಸ್ತಕ ವಿತರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾಭಿವರ್ಧಕ ಸಂಘ ಮಾಣಿ ಇದರ ಅಧ್ಯಕ್ಷರಾದ ಕಿರಣ್ ಹೆಗ್ಡೆರವರು ಮಾತನಾಡಿ ಸುಮಾರು 45 ವರ್ಷ ತುಂಬಿದ ಈ ಶಾಲೆ ಜಗತ್ತಿಗೆ ಅನೇಕ ಪ್ರತಿಭಾವಂತರನ್ನು ನೀಡಿದೆ. ನೀವೂ ಕೂಡ ಚೆನ್ನಾಗಿ ಕಲಿತು ಕೀರ್ತಿವಂತರಾಗಬೇಕೆಂದರು.

ಈ ಸಂದರ್ಭ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ ಮಾಡಲಾಯಿತು. ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಹರೀಶ್ ಮಾಣಿ, ಶಿಕ್ಷಕರಾದ ಗಂಗಾಧರ ಗೌಡ, ಶ್ಯಾಮಲಾ ಕೆ., ಹಿರಿಯ ಶಿಕ್ಷಕಿ ಐ.ಜಯಲಕ್ಷ್ಮೀ, ಶಾಲಾ ಸಿಬ್ಬಂದಿ ಅಭಿಲಾಷ್ ಕುಮಾರ್ ಜಿ. ಮೊದಲಾದವರು ಉಪಸಿತರಿದ್ದರು. ಮುಖ್ಯೋಪಾಧ್ಯಾಯರಾದ ಎಸ್.ಚೆನ್ನಪ್ಪ ಗೌಡರವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಜ್ಞಾನ ಶಿಕ್ಷಕಿ ಸುಶ್ಮಿತ ವಂದಿಸಿ, ಹಿಂದಿ ಶಿಕ್ಷಕರಾದ ಜಯರಾಮ ಕಾಂಚನ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here