ಪುತ್ತೂರು: ಆರ್ಯಾಪು ಗ್ರಾಮದ ಹಂಟ್ಯಾರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ.31ರಂದು ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಅದ್ದೂರಿಯಾಗಿ ನಡೆಸಲಾಯಿತು.
ವಿದ್ಯಾರ್ಥಿಗಳನ್ನು ಪುಷ್ಪ ಅರ್ಚನೆ ಮಾಡುವುದರ ಮೂಲಕ ವಾದ್ಯ ಘೋಷಗಳೊಂದಿಗೆ ಅದರದಿಂದ ಸ್ವಾಗತಿಸಲಾಯಿತು. ಬಲೂನು, ಪುಸ್ತಕ ಪೆನ್ಸಿಲ್, ಸಿಹಿ ತಿನಿಸುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ಬಾಬು ಮರಿಕೆ ಅಧ್ಯಕ್ಷತೆ ವಹಿಸಿದ್ದರು. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಇದರ ಅಧ್ಯಕ್ಷ ಮಲ್ಲಿಕಾ ಜೆ ರೈ, ಕಾರ್ಯದರ್ಶಿ ರೋಹಿಣಿ ಅಚಾರ್ಯ, ಖಜಾಂಚಿ ಸುಮಂಗಲ ಶೆಣೈ ಹಾಗೂ ಸದಸ್ಯರಾದ ಪುರುಷೋತ್ತಮ ಶೆಟ್ಟಿ, ಮಹಾಲಿಂಗ ನಾಯ್ಕ, ಹಾಗೂ ಚಂದ್ರಕಾಂತ್ ಬೋರ್ಕರ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಹಿರಿಯ ವಿದ್ಯಾರ್ಥಿ ಸಂಘದ ಖಜಾಂಚಿ ಸುಹೈಲ್ ಹಾಗೂ ಸದಸ್ಯರಾದ ಸತೀಶ್ ಸಂಟ್ಯಾರು ಎಸ್ಡಿಎಂಸಿ ಉಪಾಧ್ಯಕ್ಷೆ ಭವ್ಯ ಹಾಗೂ ಸದಸ್ಯರು, ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಮೋಹಿನಿ ಸ್ವಾಗತಿಸಿ, ಶಿಕ್ಷಕಿ ವಿದ್ಯಾ ಕೆ. ವಂದಿಸಿದರು. ಶಿಕ್ಷಕಿ ವತ್ಸಲಾ ಬಿ. ಕಾರ್ಯಕ್ರಮವನ್ನು ನಿರೂಪಿಸಿದರು.