ಶಾಂತಿನಗರ: ಸತ್ಯನಾರಾಯಣ ಪೂಜಾ ಸಮಿತಿಯ ಮಹಾಸಭೆ-ಪದಾಧಿಕಾರಿಗಳ ಆಯ್ಕೆ

0

ಗೌರವಾಧ್ಯಕ್ಷ: ರಾಜೇಶ್, ಅಧ್ಯಕ್ಷ: ಉಮೇಶ್, ಕಾರ್ಯದರ್ಶಿ: ಗುರುಪ್ರಸಾದ್

ಪುತ್ತೂರು: ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಶಾಂತಿನಗರ ಕೋಡಿಂಬಾಡಿ ಇದರ ಗೌರವಾಧ್ಯಕ್ಷರಾಗಿ ರಾಜೇಶ್ ಶಾಂತಿನಗರ, ಅಧ್ಯಕ್ಷರಾಗಿ ಉಮೇಶ್ ಪನಿತೋಟ ಮತ್ತು ಕಾರ್ಯದರ್ಶಿಯಾಗಿ ಗುರುಪ್ರಸಾದ್ ಅಮೀನ್ ಆಯ್ಕೆಯಾಗಿದ್ದಾರೆ.
ಶಾಂತಿನಗರದಲ್ಲಿರುವ ಪೂಜಾ ಕಟ್ಟಡದಲ್ಲಿ ಜೂ.2ರಂದು ನಡೆದ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ 2024-27ನೇ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಉಪಾಧ್ಯಕ್ಷರಾಗಿ ದಿನೇಶ್ ಜೇಡರಪಾಲು, ಜೊತೆ ಕಾರ್ಯದರ್ಶಿಯಾಗಿ ಕೀರ್ತನ್ ಎಸ್., ಕೋಶಾಧಿಕಾರಿಯಾಗಿ ಸೇಸಪ್ಪ ಎಸ್, ಕ್ರೀಡಾ ಕಾರ್ಯದರ್ಶಿಯಾಗಿ ರೋಹಿತ್ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರೀತಂ ಶೆಟ್ಟಿ ಬಿ.ಕೆ, ಸದಸ್ಯರಾಗಿ ಶೇಖರ ಬಿ, ರಮೇಶ್ ಅಮೀನ್, ಸತೀಶ್ ಎ.ಎಸ್, ಭರತ್ ಕುಮಾರ್, ಚಂದ್ರಶೇಖರ ಆಚಾರ್ಯ ಕೊಂಬಕೋಡಿ, ರಮೇಶ್ ಗೌಡ ಶಾಂತಿನಗರ, ಸಂತೋಷ್ ಕುಮಾರ್ ಶಾಂತಿನಗರ, ಉಪೇಂದ್ರ ಆಚಾರ್ಯ, ಮಹೇಶ್ ಕುಮಾರ್, ಸಂದೀಪ್ ಕೆ, ಮುಖೇಶ್ ಜೇಡರಪಾಲು, ಹಿತನ್ ಶೆಟ್ಟಿ ಇಡೆಪುಣಿ ಮತ್ತು ಸುಜಿತ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಮಹಾಸಭೆಯಲ್ಲಿ ಮಾರ್ಚ್ ತಿಂಗಳಿನಲ್ಲಿ ನಡೆದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಲೆಕ್ಕಪತ್ರ ಮಂಡನೆ ಮಾಡಿ ಅನುಮೋದನೆ ಪಡೆಯಲಾಯಿತು. ಅಲ್ಲದೆ ಮುಂದಿನ ಮೂರು ವರ್ಷಗಳ ಕಾರ್ಯ ಯೋಜನೆಯ ಕುರಿತು ಚರ್ಚಿಸಲಾಯಿತು.

LEAVE A REPLY

Please enter your comment!
Please enter your name here