ನಿಡ್ಪಳ್ಳಿ ಒಕ್ಕೂಟದ ತ್ರೈಮಾಸಿಕ ಸಭೆ

0

ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ನಿಡ್ಪಳ್ಳಿ ಒಕ್ಕೂಟದ ತ್ರೈಮಾಸಿಕ ಸಭೆ ಒಕ್ಕೂಟದ ಉಪಾಧ್ಯಕ್ಷ ಸತೀಶ್ ಮುಂಡಕೊಚ್ಚಿ ಇವರ ಅಧ್ಯಕ್ಷತೆಯಲ್ಲಿ ಜೂ.2ರಂದು ನಿಡ್ಪಳ್ಳಿ ಪ್ರಾಥಮಿಕ ಶಾಲೆಯಲ್ಲಿ ಜರಗಿತು. ಒಕ್ಕೂಟದ ಸೇವಾ ಪ್ರತಿನಿಧಿ ಶಾಲಿನಿ.ಕೆ ಮಾಹಿತಿ ನೀಡಿ, ಬಳಿಕ ಮಾತನಾಡಿ, ತಂಡಗಳು ಕ್ರಮಬದ್ದವಾಗಿ ವಾರದ ಸಭೆ ನಡೆಸುವುದು ಮತ್ತು ಸಾಲದ ಬೇಡಿಕೆಯನ್ನು ಒಕ್ಕೂಟದ ಸಭೆಯಲ್ಲಿ ನೀಡುವುದು ಮತ್ತು ಸಾಲವನ್ನು ಅದೇ ಉದ್ದೇಶಕ್ಕೆ ಬಳಸುವ ಬಗ್ಗೆ ಹೇಳಿದರು.

ವಲಯ ಮೆಲ್ವೀಚಾರಕ ಸೋಹನ್ ರವರು ಯೋಜನೆಯ ನೀತಿ ನಿಯಮಗಳನ್ನು ಸಂಘದ ಸದಸ್ಯರು ಯಾವ ರೀತಿಯಲ್ಲಿ ಪಾಲಿಸಿಕೊಂಡು ಬರಬೇಕು ಮತ್ತು ಸಾಲ ಪಡೆದ ಉದ್ದೇಶಕ್ಕೆ ಸಮರ್ಪಕವಾಗಿ ಬಳಸಿ ಅಭಿವೃದ್ಧಿ ಹೊಂದುವ ಬಗ್ಗೆ ಮತ್ತು ಸಮಯಕ್ಕೆ ಸರಿಯಾಗಿ ವಾರದ ಹಣ ಸಂಗ್ರಹಕ್ಕೆ ಕೇಂದ್ರಕ್ಕೆ ಬರುವುದು ಮುಂತಾದ ಸೂಕ್ತ ಮಾಹಿತಿ ನೀಡಿದರು. ಜನ ಕಡಿಮೆ ಇದ್ದ ಸಂಘಕ್ಕೆ ಭರ್ತಿ ಜನ ಸೇರಿಸಿದರೆ ಮಾತ್ರ ಸಾಲ ದೊರೆಯುವುದು ಎಂದು ಹೇಳಿದರು.

ಧ್ಯೇಯ ಗೀತೆಯೊಂದಿಗೆ ಆರಂಭವಾದ ಸಭೆಯಲ್ಲಿ ಒಕ್ಕೂಟದ ಕೋಶಾಧಿಕಾರಿ ತಿಮ್ಮಪ್ಪ .ಕೆ ಸ್ವಾಗತಿಸಿದರು. ಜವಾಬ್ದಾರಿ ತಂಡಗಳಿಂದ ಶುಭ.ಡಿ, ದೇವಕಿ, ತಿಮ್ಮಪ್ಪ ವರದಿ ವಾಚಿಸಿದರು. ಒಕ್ಕೂಟದ ಕಾರ್ಯದರ್ಶಿ ಒಕ್ಕೂಟದ ವರದಿ ವಾಚಿಸಿದರು. ಶುಭ ವಂದಿಸಿದರು. ಜತೆ ಕಾರ್ಯದರ್ಶಿ ಹೇಮಾ. ಸಿ.ಎಚ್ ಕಾರ್ಯಕ್ರಮ ನಿರೂಪಿಸಿದರು. ದಾಖಲಾತಿ ಸಮಿತಿ ಸದಸ್ಯರು, ಉಪಸಮಿತಿ ಸದಸ್ಯರು ಹಾಗೂ ಒಕ್ಕೂಟದ ತಂಡಗಳ ಸದಸ್ಯರು ಪಾಲ್ಗೊಂಡರು.

LEAVE A REPLY

Please enter your comment!
Please enter your name here