ಪುತ್ತೂರು ತಾಲೂಕು ಯುವ ಬಂಟರ ಸಂಘದಿಂದ ಬಂಟರ ಭವನದಲ್ಲಿ “ಯುವ ವಿಕಾಸ”

0

ಯುವ ಸಮುದಾಯ ಸಮಾಜದ ಶಕ್ತಿ- ಸವಣೂರು ಸೀತಾರಾಮ ರೈ
ನಾಯಕತ್ವಗುಣ- ಹೇಮನಾಥ ಶೆಟ್ಟಿ
ಮಾದರಿ ಕಾರ್‍ಯಕ್ರಮ- ಶಶಿಕುಮಾರ್ ರೈ
ಪ್ರಯೋಜನಕಾರಿ- ದಯಾನಂದ ರೈ
ಸಮಾಜಮುಖಿ ಕಾರ್‍ಯಕ್ರಮ- ಸಾಜ ರಾಧಾಕೃಷ್ಣ ಆಳ್ವ

ಪುತ್ತೂರು: ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಜೂ.2ರಂದು ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಒಂದು ದಿನದ ನಾಯಕತ್ವ, ವ್ಯಕ್ತಿತ್ವ ವಿಕಸನ ಮತ್ತು ಪರಿಣಾಮಕಾರಿ ಸಂವಹನ ದ ಬಗ್ಗೆ ತರಬೇತಿಯ ” ಯುವ ವಿಕಾಸ” ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಯುವ ಸಮುದಾಯ ಸಮಾಜದ ಶಕ್ತಿ- ಸವಣೂರು ಸೀತಾರಾಮ ರೈ
ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಸಹಕಾರತ್ನ ಸವಣೂರು ಕೆ.ಸೀತಾರಾಮ ರೈಯವರು ದೀಪ ಬೆಳಗಿಸಿ, ಉದ್ಘಾಟನೆಗೈದು ಮಾತನಾಡಿ ಹರ್ಷಕುಮಾರ್ ರೈ ಮತ್ತು ಅವರ ತಂಡ ಉತ್ತಮವಾದ ಕಾರ್‍ಯಕ್ರಮವನ್ನು ಸಂಘಟಿಸಿದ್ದಾರೆ. ಯುವ ಸಮುದಾಯ ಸಮಾಜದ ಶಕ್ತಿಯಾಗಿದ್ದು, ಬಂಟ ಸಮಾಜದ ಯುವ ಪೀಳಿಗೆಯ ಅಭಿವೃದ್ಧಿಗೆ ಇಂಥಹ ಕಾರ್‍ಯಕ್ರಮ ಸಹಕಾರಿ ಎಂದರು.

ನಾಯಕತ್ವಗುಣ- ಹೇಮನಾಥ ಶೆಟ್ಟಿ
ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಬಂಟ ಸಮಾಜಕ್ಕೆ ನಾಯಕತ್ವ ಗುಣ ರಕ್ತಗತವಾಗಿ ಬಂದಿದೆ, ಇದನ್ನು ಮತ್ತಷ್ಟು ವಿಕಸನಗೊಳ್ಳಲು ತರಬೇತಿ ಅವಶ್ಯವಾಗಿದ್ದು, ಯುವ ಬಂಟರ ಸಂಘದ ಈ ಪ್ರಯತ್ನ ಶ್ಲಾಘನೀಯ ಎಂದರು.

ಮಾದರಿ ಕಾರ್‍ಯಕ್ರಮ- ಶಶಿಕುಮಾರ್ ರೈ
ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ಯುವ ಬಂಟರಿಗೆ ತರಬೇತಿ ನೀಡುವ ಯುವ ವಿಕಾಸ ಮಾದರಿ ಕಾರ್‍ಯಕ್ರಮವಾಗಿದೆ ಎಂದರು.

ಪ್ರಯೋಜನಕಾರಿ- ದಯಾನಂದ ರೈ
ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಂಚಾಲಕ ದಯಾನಂದ ರೈ ಮನವಳಿಕೆಗುತ್ತುರವರು ಮಾತನಾಡಿ ಹರ್ಷಕುಮಾರ್ ರೈ ಮತ್ತು ತಂಡದ ಯುವ ಬಂಟರ ಸಂಘವು ಹಮ್ಮಿಕೊಂಡಿರುವ ಕಾರ್‍ಯಕ್ರಮ ಯುವ ಬಂಟರಿಗೆ ತುಂಬಾ ಪ್ರಯೋಜನಕಾರಿ ಎಂದರು.

ಸಮಾಜಮುಖಿ ಕಾರ್‍ಯಕ್ರಮ- ಸಾಜ ರಾಧಾಕೃಷ್ಣ ಆಳ್ವ
ಯುವ ಬಂಟರ ಸಂಘದ ಸ್ಥಾಪಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ ಯುವ ಬಂಟರ ಸಂಘವು ಉತ್ತಮ ಸಮಾಜಮುಖಿ ಕಾರ್‍ಯಕ್ರಮಗಳನ್ನು ಹಮ್ಮಿಕೊಂಡಿದೆ. ಹರ್ಷಕುಮಾರ್ ರೈ ಮಾಡಾವುರವರ ನೇತ್ರತ್ವದಲ್ಲಿ ಮುಂದೆಯೂ ಅತ್ಯುತ್ತಮವಾದ ಕಾರ್‍ಯಗಳು ನಡೆಯಲಿ ಎಂದರು.

ಗೌರರ್ವಣೆ
ಸಹಕಾರರತ್ನ ಸವಣೂರು ಸೀತಾರಾಮ ರೈ ಮತ್ತು ತರಬೇತುದಾರರಾದ ಡಾ.ಅನಿಲ ದೀಪಕ್ ಶೆಟ್ಟಿ, ಅನಿಲ್ ಶೆಟ್ಟಿ ಬೆಂಗಳೂರು ಹಾಗೂ ಅಕ್ಷತಾ ಶೆಟ್ಟಿಯವರುಗಳನ್ನು ಯುವ ಬಂಟರ ಸಂಘದ ವತಿಯಿಂದ ಗೌರವಿಸಲಾಯಿತು.

ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಹಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ಮಾತೃ ಸಂಘದ ನಿರ್ದೇಶಕಿ ವಾಣಿ ಶೆಟ್ಟಿ ನೆಲ್ಯಾಡಿ, ಯುವ ಬಂಟರ ಸಂಘದ ನಿಕಟಪೂರ್ವಾಧ್ಯಕ್ಷ ಶಶಿರಾಜ್ ರೈ ಮುಂಡಾಳಗುತ್ತು ಉಪಸ್ಥಿತರಿದ್ದರು.
ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು ಸ್ವಾಗತಿಸಿ, ಕೋಶಾಧಿಕಾರಿ ಶಿವಶ್ರೀ ರಂಜನ್ ರೈ ದೇರ್ಲ ಕಾರ್‍ಯಕ್ರಮ ನಿರೂಪಿಸಿದರು. ಜೊತೆ ಕಾರ್‍ಯದರ್ಶಿ ಶುಭಾ ರೈ ಪ್ರಾರ್ಥನೆಗೈದರು. ಪ್ರಧಾನಕಾರ್‍ಯದರ್ಶಿ ರಂಜನಿ ಶೆಟ್ಟಿ ವಂಂದಿಸಿದರು. ಪ್ರಧಾನ ಕಾರ್‍ಯದರ್ಶಿ ಪ್ರಜ್ವಲ್ ರೈ ಸೊರಕೆ ಹಾಗೂ ಆಭಿಷೇಕ್ ರೈಯವರಗಳು ಸಂಪನ್ನೂಲ ವ್ಯಕ್ತಿಗಳ ಪರಿಚಯಗೈದರು.


ಯುವ ಬಂಟರು ಏಕತೆಯ ಉದ್ದೇಶ
ತಾಲೂಕು ಯುವ ಬಂಟರ ಸಂಘದಿಂದ ತಾಲೂಕಿನ ಎಲ್ಲಾ ಗ್ರಾಮಗಳಿಂದ ಮತ್ತು ನಗರ ಪ್ರದೇಶಗಳ ಯುವ ಬಂಟರ ಒಗ್ಗೂಡಿಸು ಕಾರ್‍ಯವನ್ನು ಮಾಡುತ್ತಿದ್ದು, ಇಂದು ನಡೆದ ತರಬೇತಿ ಶಿಬಿರ ಅರ್ಥಪೂರ್ಣವಾಗಿ ನಡೆಯಿತು. ಮುಂದೆಯೂ ಸಂಘದಿಂದ ಮತ್ತಷ್ಟು ಯುವ ಬಂಟರ ಏಕತೆ ಮತ್ತು ಐಕ್ಯತೆಗಾಗಿ ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

  • ಹರ್ಷಕುಮಾರ್ ರೈ ಮಾಡಾವು
    ಅಧ್ಯಕ್ಷರು-ಯುವ ಬಂಟರ ಸಂಘ ಪುತ್ತೂರು ತಾಲೂಕು

LEAVE A REPLY

Please enter your comment!
Please enter your name here