ಪುತ್ತೂರು:ಇಲ್ಲಿನ ಮಹಮ್ಮಾಯ ದೇವಸ್ಥಾನದ ಬಳಿಯ ಚೇತನಾ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಸಹಯೋಗದೊಂದಿಗೆ ಜೂ.5 ರಂದು ಫ್ಯಾಟಿ ಲಿವರ್(ಲಿವರ್ ನ ಕೊಬ್ಬು) ಇರುವವರಿಗೆ ವಿಶೇಷ ಫೈಬ್ರೋಸ್ಕ್ಯಾನ್ ಹಾಗೂ ಲಿವರ್ ಫಂಕ್ಷನ್ ಟೆಸ್ಟ್ ತಪಾಸಣೆಯನ್ನು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಮಾಡಲಾಗುವುದು. ಈ ಪರೀಕ್ಷೆಯು ಉಚಿತವಾಗಿದ್ದು ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿದೆ. ತಪಾಸಣೆ ಮಾಡಲಿಚ್ಛಿಸುವವರು 08251-231901/23902/231247, ಮೊ:8123276901 ನಂಬರಿಗೆ ಕರೆ ಮಾಡಿ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಆಸ್ಪತ್ರೆ ಪ್ರಕಟಣೆ ತಿಳಿಸಿದೆ.