ಪೆರ್ನೆ: ಅಕ್ರಮ ಮರಳು ಸಾಗಾಟ -ಕೇಸು

0

ಪುತ್ತೂರು: ಪಿಕಪ್ ವಾಹನವೊಂದರಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದನ್ನು ಬಿಳಿಯೂರು ಗ್ರಾಮದ ಕಳಂಜ ಎಂಬಲ್ಲಿ ಪತ್ತೆ ಹಚ್ಚಿರುವ ಉಪ್ಪಿನಂಗಡಿ ಪೊಲೀಸರು ಮರಳು ಹಾಗೂ ಪಿಕಪ್ ವಶಪಡಿಸಿಕೊಂಡ ಘಟನೆ ಆ.24ರಂದು ನಡೆದಿದೆ.


ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಉಪ್ಪಿನಂಗಡಿ ಪೊಲೀಸರು ಬಿಳಿಯೂರು ಗ್ರಾಮದ ಮೇಗಿನಮನೆ ಕಳಂಜ ಎಂಬಲ್ಲಿ ಪಿಕಪ್ ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. ಪಿಕಪ್ ಚಾಲಕ ಮಲ್ಲಡ್ಕ ನಿವಾಸಿ ಉಮೇಶ ಮೂಲ್ಯ ಹಾಗೂ ಹನುಮಾಜೆ ನಿವಾಸಿ ಸುಂದರ ಎಂಬವರು ಬಿಳಿಯೂರು ಗ್ರಾಮದ ಅರ್ಬಿ ಎಂಬಲ್ಲಿ ಹರಿಯುತ್ತಿರುವ ನೇತ್ರಾವತಿ ನದಿಯಿಂದ ಯಾವುದೇ ಪರವಾನಿಗೆ ಯಾ ಅನುಮತಿ ಪಡೆಯದೇ ಮರಳು ಸಾಗಾಟ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಮರಳು ಸಾಗಾಟಕ್ಕೆ ಬಳಸಿದ್ದ 4 ಲಕ್ಷ ರೂ.ಮೌಲ್ಯದ ಪಿಕಪ್ (ಕೆಎ 19, ಎಬಿ 4310) ಹಾಗೂ ಪಿಕಪ್‌ನಲ್ಲಿದ್ದ 5 ಸಾವಿರ ರೂ.ಮೌಲ್ಯದ ಮರಳು ವಶಪಡಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here