ವ್ಯವಹಾರದಲ್ಲೂ, ಲಾಭಾಂಶದಲ್ಲೂ ದಾಖಲೆ : ಸಿಬ್ಬಂದಿಗಳಿಗೆ ಸಂದ ಗೌರವ- ಎಪಿಎಂಸಿ ಶಾಖೆ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಪಾದಾರ್ಪಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷ ಚಿದಾನಂದ ಬೈಲಾಡಿ

0

ಪುತ್ತೂರು: 2022-23ರ ಅವಧಿಯಲ್ಲಿ ದಾಖಲೆಯ ವ್ಯವಹಾರ ನಡೆಸಿ, ಸುಮಾರು ರೂ.542 ಕೋಟಿಗೆ ಸಂಬಂಧಿಸಿ ಪ್ರಥಮ ಬಾರಿಗೆ ಚಿನ್ನದ ಪದಕ ಸ್ವೀಕರಿಸುವ ಅವಕಾಶವೂ ಲಭ್ಯವಾಗಿದೆ. ದಾಖಲೆಯ ಲಾಭಾಂಶವೂ ಬಂದಿದೆ. ಇವೆಲ್ಲ ಸಂಘದ ಸಿಬ್ಬಂದಿಗಳ ಕಾರ್ಯಕ್ಷಮತೆಗೆ ಸಂದ ಗೌರವ ಎಂದು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಹೇಳಿದರು.


ಪುತ್ತೂರು ಎಪಿಎಂಸಿ ಸಹಿತ ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು, ಎಸ್‌ಎಮ್‌ಟ ಪುತ್ತೂರು, ಕಾಣಿಯೂರು, ಬೆಳ್ಳಾರೆ ಶಾಖೆಯನ್ನೊಳಗೊಂಡ ಎಪಿಎಂಸಿ ಮಾಣಯಿ ಆರ್ಚ್ ಕಟ್ಟಡದಲ್ಲಿರುವ ಪುತ್ತೂರಿನ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿರುವ ಎಪಿಎಂಸಿ ಶಾಖೆ ಸ್ಥಳಾಂತರಗೊಂಡು 5ನೇ ವರ್ಷಕ್ಕೆ ಪಾರ್ದಾರ್ಪಣೆಯ ಶುಭ ಸಂದರ್ಭದಲ್ಲಿ ಜೂ.5ರಂದು ಸಂಘದ ಕಚೇರಿಯಲ್ಲಿ ನಡೆದ ಗಣಪತಿ ಹೋಮ, ಲಕ್ಷ್ಮೀಪೂಜೆಯ ಬಳಿಕ ಸರಳ ಸಮಾರಂಭದಲ್ಲಿ ಅವರು ಮಾತನಾಡಿದರು.

ವ್ಯವಹಾರದಲ್ಲೂ ದಾಖಲೆ, ಕಳೆದ ವರ್ಷ ರೂ.1.50 ಕೋಟಿ ಲಾಭಾಂಶ ಬಂದಿದೆ. ಇದನ್ನು ಅಧೀಕೃತವಾಗಿ ಹೇಳಲು ಈಗ ಆಗುವುದಿಲ್ಲ. ಇದರೊಂದಿಗೆ ಎಲ್ಲಾ ಶಾಖೆಗಳು ಒಟ್ಟಾಗಿ ಶೇ.99.12 ಸಾಲ ವಸೂಲಾತಿ ಮಾಡಿಕೊಂಡಿರುವುದು ಸಂತೋಷದ ವಿಚಾರ. ಎಪಿಎಂಸಿ ಶಾಖೆ ಗುರಿ ಸಾಲದ ನೀಡುವಲ್ಲಿ ವಸೂಲಾತಿಯಲ್ಲಿ ಹಾಗು ಠೇವಣಿ ಸಂಗ್ರಹದಲ್ಲಿ ಗುರಿ ಮೀರಿದ ಸಾಧನೆ ಮಾಡಿದೆ. ಇವತ್ತು ಶಾಖೆಯಲ್ಲಿ ಆರೋಗ್ಯಕರ ಪೈಪೋಟಿ ನಡೆಯುತ್ತಿದೆ. ಇದು ಸಂಘದ ಅಭಿವೃದ್ದಿಗೆ ಪೂರಕವಾಗಿದೆ. ಇಷ್ಟೆಲ್ಲ ಸಾಧನೆ ಮಾಡಿರುವ ನಮ್ಮ ಸಿಬ್ಬಂದಿಗಳನ್ನು ನಾವು ಗೌರವಿಸುವುದು ಮುಖ್ಯ ಎಂದ ಅವರು ಶಾಖಾ ವ್ಯವಸ್ಥಾಪಕಿ ತೇಜಸ್ವಿನಿ ಮತ್ತು ಸಿಬ್ಬಂದಿಗಳನ್ನು ಪ್ರಧಾನ ಕಚೇರಿ ಕಾರ್ಯನಿರ್ವಾಹಣಾಧಿಕಾರಿ ಸುಧಾಕರ್ ಕೆ ಅವರನ್ನು ಗೌರವಿಸಿದರು.


ದೈವ ದೇವರ ಅನುಗ್ರಹ ಮುಖ್ಯ:
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ಅವರು ಮಾತನಾಡಿ ಸಂಘದ ಬೆಳವಣಿಗೆಗೆ ಗ್ರಾಹಕರ ಪಾತ್ರದೊಂದಿಗೆ ದೈವ ದೇವರ ಅನುಗ್ರಹ ಮುಖ್ಯ. ಹಾಗಾಗಿ ಶಾಖೆಯ ಪಾದಾರ್ಪಣೆಯ ಶುಭ ಸಂದರ್ಭದಲ್ಲಿ ಗಣಪತಿ ಹೋಮ ಮತ್ತು ಲಕ್ಷ್ಮೀಪೂಜೆ ನೆರವೇರಿಸಿದ್ದೇವೆ. ಮುಂದೆಯೂ ಎಲ್ಲರ ಸಹಕಾರ ನಿತ್ಯ ಸಂಘದ ಮೇಲಿರಲಿ ಎಂದರು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಸಂಘದ ನಿರ್ದೇಶಕರಾದ ಜಿನ್ನಪ್ಪ ಗೌಡ ಮಳವೇಲು, ನಿರ್ದೇಶಕ ಪ್ರವೀಣ್ ಕುಂಟ್ಯಾನ, ಸಲಹಾ ಸಮಿತಿ ಸದಸ್ಯರಾದ ವಿಶ್ವನಾಥ ಗೌಡ ಕೆ, ಶ್ರೀಧರ್ ಗೌಡ ಕಣಜಾಲು, ಲಿಂಗಪ್ಪ ಗೌಡ ತೆಂಕಿಲ, ಸುಂದರ ಗೌಡ ನಡುಬೈಲು, ಸಂಧ್ಯಾ ಶಶಿಧರ್, ಒಕ್ಕಲಿಗ ಮಹಿಳಾ ಗೌಡ ಸಂಘದ ಅಧ್ಯಕ್ಷೆ ವಾರಿಜ ಕೆ, ಕಟ್ಟಡದ ಮಾಲಿಕ ಜಯರಾಮ ಮಣ್ಣಾಯಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯ ರಾಮದಾಸ್ ಗೌಡ, ಮಾಜಿ ನಿರ್ದೇಶಕರಾದ ಸಾವಿತ್ರಿ ಕೆ, ಪ್ರವರ್ತಕರಾದ ನಾರಾಯಣ ಗೌಡ ಅರುವಾರ, ಗಣಪಣ್ಣ ಗೌಡ, ಉಪ್ಪಿನಂಗಡಿ ಶಾಖಾ ಮ್ಯಾನೇಜರ್ ರೇವತಿ ಯೆಚ್, ಕುಂಬ್ರ ಶಾಖಾ ಮ್ಯಾನೇಜರ್ ಹರೀಶ್, ಎಸ್‌ಎಮ್‌ಟಿ ಶಾಖಾ ಮ್ಯಾನೇಜರ್ ನಿಶ್ಚಿತಾ ಯು.ಡಿ, ಸಿಬ್ಬಂದಿಗಳಾದ ವೀಕ್ಷಿತಾ, ಜಯಂತ್, ದೇವರಾಜ್, ಸಂಘದ ಹಿತೈಷಿಗಳಾದ ಪುಟ್ಟಣ್ಣ ಗೌಡ, ಗಿರಿಯಪ್ಪ ಗೌಡ ಪೋಳ್ಯ, ಸುರೇಶ್ ಕಲ್ಲಾರೆ, ಮಧುಕರ್, ಲತಾ ಕಲ್ಲಾರೆ, ಕಿರಣ್ ಮುಂಗ್ಲಿಮನೆ, ರಾಧಾಕೃಷ್ಣ ಗೌಡ, ವಿಶ್ವನಾಥ ಬನ್ನೂರು, ರವಿಚಂದ್ರ ಹೊಸೊಕ್ಲು, ಕೆ.ಪಿ.ಗೌಡ, ಎಪಿಎಂಸಿ ಶಾಖೆಯ ಸಿಬ್ಬಂದಿ ರಕ್ಷಿತ್, ಅವಿಂತಾ ಡಿ, ಯಶ್ವಿತ್, ಮೋಹನ್ ಗೌಡ ಡಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ರಾಮಕೃಷ್ಣ ಕೆ ವಂದಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಗಣಪತಿ ಹೋಮ ಮತ್ತು ಲಕ್ಷ್ಮಿಪೂಜೆಯು ಅರ್ಚಕ ವೇ ಮೂ ಹರೀಶ್ ಭಟ್ ಅವರ ನೇತೃತ್ವದಲ್ಲಿ ನಡೆಯಿತು.

ಜು.13ಕ್ಕೆ ವಿಟ್ಲ ಶಾಖೆ ಉದ್ಘಾಟನೆ
ಎಲ್ಲಾ ಶಾಖೆಗಳ ವ್ಯವಹಾರಗಳು ವ್ಯವಸ್ಥಿತವಾಗಿ ಮತ್ತು ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ. ಈಗಾಗಲೇ 10ನೇ ಶಾಖೆಯನ್ನು ವಿಟ್ಲದಲ್ಲಿ ಆರಂಭಿಸುವ ತೀರ್ಮಾಣದಂತೆ ಜು.13ಕ್ಕೆ ವಿಟ್ಲ ಶಾಖೆಯ ಉದ್ಘಾಟನೆ ನಡೆಯಲಿದೆ.
ಚಿದಾನಂದ ಬೈಲಾಡಿ, ಅಧ್ಯಕ್ಷರು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ

LEAVE A REPLY

Please enter your comment!
Please enter your name here