ಸೈಂಟ್ ಕ್ರಿಸ್ಟೋಫರ್ ಅಸೋಸಿಯೇಷನ್ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯ ಸೈಂಟ್ ಕ್ರಿಸ್ಟೋಫರ್ ಅಸೋಸಿಯೇಷನ್ ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ವಿಕ್ಟರ್ ಶರೋನ್ ಡಿ’ಸೋಜ ಬೆಳಿಯೂರುಕಟ್ಟೆ, ಕಾರ್ಯದರ್ಶಿಯಾಗಿ ಎಪಿಎಂಸಿ ಕ್ರಿಸ್ಟೋಫರ್ ಸಮೂಹ ಸಂಸ್ಥೆಯ ನಿರ್ದೇಶಕಿ ಜೆನಿಫರ್ ನಿಶಾ ಮಸ್ಕರೇನ್ಹಸ್, ಉಪಾಧ್ಯಕ್ಷರಾಗಿ ಎಪಿಎಂಸಿ ರಸ್ತೆ ಜೆಎಂಜೆ ಕಾಂಪ್ಲೆಕ್ಸ್ ಮಾಲಕ ಆಂಟನಿ ಒಲಿವೆರಾ, ಜೊತೆ ಕಾರ್ಯದರ್ಶಿಯಾಗಿ ಎಪಿಎಂಸಿ ರಸ್ತೆ ಎಂಸಿಸಿ ಬ್ಯಾಂಕ್ ಉದ್ಯೋಗಿ ಪಾವ್ಲ್ ಮೊಂತೇರೊ ಕಲ್ಲಾರೆ, ಕೋಶಾಧಿಕಾರಿಯಾಗಿ ರೋವ್ ಎಂಟರ್ಪ್ರೈಸಸ್ ಮಾಲಕ ರೋಹನ್ ಡಾಯಸ್ ಕಲ್ಲಿಮಾರು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜ್ಯೋ ಡಿ’ಸೋಜ ಚಿಕ್ಕಪುತ್ತೂರು, ಆಲನ್ ಮಿನೇಜಸ್ ಕಲ್ಲಿಮಾರು, ಅರುಣ್ ರೆಬೆಲ್ಲೋ ದರ್ಬೆ, ಮನೋಜ್ ಡಾಯಸ್ ಎಪಿಎಂಸಿ ರಸ್ತೆ, ವಲೇರಿಯನ್ ಡಾಯಸ್ ಎಪಿಎಂಸಿ ರಸ್ತೆ, ಹೆರಿ ಡಾಯಸ್ ಕಲ್ಲಿಮಾರುರವರು ಆಯ್ಕೆಯಾಗಿದ್ದರು.


ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿಕ್ಟರ್ ಶರೋನ್ ಡಿ’ಸೋಜರವರು ಡೊನ್ ಬೊಸ್ಕೊ ಕ್ಲಬ್ ಕೋಶಾಧಿಕಾರಿಯಾಗಿ, ಸೈಂಟ್ ಮಿಲಾಗ್ರಿಸ್ ಕ್ರೆಡಿಟ್‌ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಪುತ್ತೂರು, ಮಂಗಳೂರು ಹಾಗೂ ಚಿಕ್ಕಮಗಳೂರು ವಿಭಾಗದ ಡಿವಿಷನ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿರುತ್ತಾರೆ. ಪ್ರಸ್ತುತ ಎಪಿಎಂಸಿ ರಸ್ತೆಯ ಜೆಎಂಜೆ ಕಾಂಪ್ಲೆಕ್ಸ್ ನಲ್ಲಿ ಸ್ವಂತ ಉದ್ಯಮ ಕ್ಷೇತ್ರವಾದ ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಅನ್ನು ಸ್ಥಾಪಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಮುನ್ನೆಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here