ನರಿಮೊಗರು : ಪುತ್ತೂರು ತಾಲೂಕಿನ ಕೇಂದ್ರ ಸರ್ಕಾರ ಪುರಸ್ಕೃತ ಪಿಎಂಶ್ರೀ ಶಾಲೆಯಾಗಿ ರೂಪುಗೊಂಡಿರುವ ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಪರಿಸರದ ವಿಸ್ಮಯಗಳ ಕುರಿತು ಮಕ್ಕಳಿಗೆ ವಿಚಾರ ವಿನಿಮಯ ಮಾಡಿ ವಿವಿಧ ರೀತಿಯ ಗಿಡಗಳನ್ನು ನೆಡಲಾಯಿತು. ಹೂವಿನ ಗಿಡ ಹಣ್ಣಿನ ಗಿಡಗಳನ್ನು ನೆಟ್ಟು ಅದನ್ನು ರಕ್ಷಿಸುವ ವಿಧಾನಗಳನ್ನು ಮಕ್ಕಳಿಗೆ ಹೇಳಲಾಯಿತು. ಶಾಲಾ ಮುಖ್ಯಗುರು ತಾರಾನಾಥ ಸವಣೂರು ಶಾಲಾ ಶಿಕ್ಷಕರಾದ ಹರಿಣಾಕ್ಷಿ ,ಶೋಬಾ ಹೇಮಾವತಿ ಶ್ರೀಲತಾ ,ಕವಿತಾ ,ಶಿಲ್ಪರಾಣಿ, ಸೌಮ್ಯ ಎಲ್ ಕೆ ಜಿ ಶಿಕ್ಷಕಿಯರಾದ ಸವಿತಾ, ಸಂಚನಾ, ಚಂದ್ರಾವತಿ ಅಡುಗೆ ಸಿಬ್ಬಂಧಿಗಳಾದ ಪಾರ್ವತಿ,ಸುಶೀಲ,ಪ್ರೇಮ ಸೇರಿದಂತೆ ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು ಪರಿಸರ ದಿನ ಆಚರಿಸಿದರು.