





ಪುತ್ತೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕೊಳ್ತಿಗೆ ಗ್ರಾಮದ ಬಿಜೆಪಿ ಕಾರ್ಯಕರ್ತರು ಪೆರ್ಲಂಪಾಡಿಯಲ್ಲಿ ವಿಜಯೋತ್ಸವ ಆಚರಿಸಿದರು. ಪ್ರಧಾನಿ ಮೋದಿಯವರಿಗೆ ಜೈಕಾರ ಹಾಕುವ ಮೂಲಕ ಲಕ್ಷಕ್ಕೂ ಮಿಕ್ಕಿ ಮತಗಳಿಂದ ಜಯಗಳಿಸಿದ ಕ್ಯಾ.ಬ್ರಿಜೇಶ್ ಚೌಟರವರಿಗೆ ಜೈಕಾರ ಕೂಗಿದರು. ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.


ಈ ಸಂದರ್ಭದಲ್ಲಿ ಭಾಸ್ಕರ ರೈ ಕಂಟ್ರಮಜಲು, ತೀರ್ಥಾನಂದ ಗೌಡ ದುಗ್ಗಳ, ಸುಧೀರ್ ಕಟ್ಟಪುಣಿ, ಸತೀಶ್ ಪಾಂಬಾರು, ತಿರುಮಲೇಶ್ವರ ಗೌಡ ದೊಡ್ಡಮನೆ, ಸತ್ಯಪ್ರಕಾಶ್ ಕುಂಟಿಕಾನ, ಶೋಭಿತ್ ಕೆಮ್ಮಾರ, ಉದಯ ಕುಮಾರ್ ಜಿ.ಕೆ, ಅಶೋಕ್ ಓರ್ಕೊಂಬು, ಗಿರೀಶ್ ಪಾದೆಕಲ್ಲು, ರಜನೀಶ್ ಬೇರಿಕೆ, ರತ್ನಾಕರ ಗೌಡ ಪೆರ್ಲಂಪಾಡಿ, ಪುಷ್ಪರಾಜ್ ಕಲಾಯಿ, ಮೋಕ್ಷಿತ್ ಬಾಯಂಬಾಡಿ, ಸುನೀಲ್ ದೊಡ್ಡಮನೆ, ತಿಮ್ಮಪ್ಪ ಗೌಡ ನೂಜಿ, ಮನ್ಮಥ ಕುದ್ಕುಳಿ, ರವಿ ಕೊರ್ಬಂಡ್ಕ, ಶ್ರೀನಿವಾಸ ದೊಡ್ಡಮನೆ ಸೇರಿದಂತೆ ಹಲವು ಮಂದಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.













