ಪೇರಲ್ತಡ್ಕ ಶಾಲಾ ಪ್ರಾರಂಭೋತ್ಸವ- ಸಮವಸ್ತ್ರ ಪಠ್ಯಪುಸ್ತಕ ವಿತರಣೆ

0

ನಿಡ್ಪಳ್ಳಿ: ದ.ಕ.ಜಿ.ಪಂ. ಉನ್ನತ ಹಿರಿಯ ಪ್ರಾಥಮಿಕ ಶಾಲೆ ಪೇರಲ್ತಡ್ಕ ಇದರ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಮೇ.31ರಂದು ನಡೆಯಿತು.

ನಂತರ ಇಲಾಖೆ ನೀಡಿದ ಸಮವಸ್ತ್ರ ಮತ್ತು ಪಠ್ಯಪುಸ್ತಕವನ್ನು ವಿತರಿಸಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷ ಹನೀಫ್.ಪಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿಎಂಸಿ ಉಪಾಧ್ಯಕ್ಷೆ ತುಳಸಿ.ಎ, ಸಿ.ಆರ್.ಪಿ ಬಾಲಕೃಷ್ಣ.ಕೆ, ಅಂಗನವಾಡಿ ಕಾರ್ಯಕರ್ತೆ ನೀತಾ.ಪಿ ಉಪಸ್ಥಿತರಿದ್ದು, ಶೈಕ್ಷಣಿಕ ಚಟುವಟಿಕೆಗಳಿಗೆ ಶುಭ ಹಾರೈಸಿದರು. ಅಡುಗೆ ಸಹಾಯಕಿ ಮೋಹಿನಿ 1ನೇ ತರಗತಿಗೆ ಸೇರ್ಪಡೆ ಗೊಂಡ ಮಕ್ಕಳಿಗೆ ಪುಸ್ತಕ ನೀಡಿದರು.ರೇಣುಕಾ ಮತ್ತು ಶಿವಪ್ರಸಾದ್ ಮೇರ್ವೆ ನಲಿಕಲಿ ತರಗತಿ ಮಕ್ಕಳಿಗೆ ಕುಳಿತು ಕೊಳ್ಳಲು ಚಾಪೆಯನ್ನು ನೀಡಿದರು.ರೋಝಾ ಸೌಂಡ್ಸ್ ನವರು ಸಿಹಿತಿಂಡಿ ವ್ಯವಸ್ಥೆ ಮಾಡಿದ್ದರು. ಮುಖ್ಯ ಶಿಕ್ಷಕಿ ಜಾನಕಿ.ಕೆ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here