ಪುಂಜಾಲಕಟ್ಟೆ ಬುರೂಜ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ಪುತ್ತೂರು : ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ರಝಾನಗರ ಕಲಾಬಾಗಿಲು ಮೂಡುಪಡುಕೋಡಿ ಇಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಜೂ.5 ರಂದು ಆಚರಿಸಲಾಯಿತು.
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಿಮಲ ಸಮ್ಮುಖದಲ್ಲಿ ವಿದ್ಯಾರ್ಥಿಗಳು ಗಿಡ ನೆಡುವುದರ ಮೂಲಕ ಇಂದಿನ ದಿನಕ್ಕೆ ಅರ್ಥ ಕಲ್ಪಿಸಿದರು.


ಈ ಸಂದರ್ಭದಲ್ಲಿ ಶಿಕ್ಷಕಿ ಎಲ್ಸಿ ಲಸ್ರಾದೊ ಮಾತಾಡಿ “ಕೇವಲ ಗಿಡ ನೆಡುವುದು ಮಾತ್ರವಲ್ಲ ಅದನ್ನು ಬೆಳೆಸಿ , ಪೋಷಿಸುವುದು ಅಷ್ಟೇ ಮುಖ್ಯ ಎಂದು ಹೇಳಿ ,ಹಾರೈಸಿದರು.
ಶೇಖ್ ಜಲಾಲುದ್ದೀನ್ ಮಾತನಾಡಿ , ಪರಿಸರ ಕಾಳಜಿ ಹಾಗೂ ಪರಿಸರ ರಕ್ಷಣೆ ಹೇಗೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿ , ಪ್ರತಿ ತರಗತಿಯ ವಿದ್ಯಾರ್ಥಿಗಳು ಒಂದೊಂದು ಗುಂಪು ಮಾಡಿ ಮುಂದಿನ ಬುಧವಾರ ಪ್ರತಿ ತಂಡದವರು ಒಂದೊಂದು ಗಿಡ ನೆಟ್ಟು ಅದನ್ನು ಪೋಷಿಸಬೇಕು ,ಸರಿಯಾಗಿ ಪೋಷಿಸುವ ತಂಡಕ್ಕೆ ಶಾಲಾ ವಾರ್ಷೀಕೋತ್ಸವದಂದು ವಿಶೇಷ ಬಹುಮಾನ ವಿತರಿಸಲಾಗುವುದು ಎಂದರು. ಈ ಸಮಯದಲ್ಲಿ ಶಾಲಾ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಕ ವೃಂದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here