ಜೂ.7: ಅದ್ದೂರಿ ತಾರಾಗಣದ ‘ತುಡರ್’ ತುಳು ಸಿನೆಮಾದ ಪ್ರೀಮಿಯರ್ ಶೋ-ಭಾರತ್ ಸಿನೆಮಾಸ್‌ನಲ್ಲಿ

0

ಪುತ್ತೂರು: ಜೂನ್ 14 ಕ್ಕೆ ಕರುನಾಡಿನಾದ್ಯಂತ ಬಿಡುಗಡೆಯಾಗಲಿರುವ ತುಳು ಚಿತ್ರರಂಗದ ಬಹು ನಿರೀಕ್ಷೆಯ, ಸಾಮಾಜಿಕ, ಸಾಂಸಾರಿಕ, ಸಸ್ಪೆನ್ಸ್ ಹಾಗೂ ಅದ್ದೂರಿ ತಾರಾಗಣದ ಮಾಸ್ ಸಿನೆಮಾ “ತುಡರ್” ಚಿತ್ರದ ಪ್ರೀಮಿಯರ್ ಶೋ ಜೂ.7 ರಂದು ಪುತ್ತೂರಿನ ಜಿ.ಎಲ್.ವನ್ ಮಾಲ್‌ನಲ್ಲಿನ ಭಾರತ್ ಸಿನೆಮಾಸ್‌ನಲ್ಲಿ ರಾತ್ರಿ ಏಳು ಗಂಟೆಗೆ ಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ.


2 ಶೋ, ಟಿಕೇಟ್ ಸೋಲ್ಡ್‌ಔಟ್:
ಈಗಾಗಲೇ ರೋಟರಿ ಕ್ಲಬ್ ಪುತ್ತೂರು ಸಿಟಿ ನೇತೃತ್ವದಲ್ಲಿ ಪುತ್ತೂರಿನ ಎಂಟು ರೋಟರಿ ಕ್ಲಬ್‌ಗಳಾದ ರೋಟರಿ ಕ್ಲಬ್ ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ರೋಟರಿ ಕ್ಲಬ್ ಪುತ್ತೂರು ಎಲೈಟ್, ರೋಟರಿ ಕ್ಲಬ್ ಪುತ್ತೂರು ಯುವ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ರೋಟರಿ ಕ್ಲಬ್ ಪುತ್ತೂರು ಈಸ್ಟ್, ರೋಟರಿ ಕ್ಲಬ್ ಪುತ್ತೂರು ಬಿರುಮಲೆ ಕ್ಲಬ್, ಪುತ್ತೂರು ಜೇಸಿಐ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಲಯನ್ಸ್ ಕ್ಲಬ್ ಪುತ್ತೂರ‍್ದ ಮುತ್ತು,ಯುವ ಬಂಟರ ಸಂಘ ಪುತ್ತೂರು, ಪುತ್ತೂರು ತುಳು ಕೂಟರವರ ಸಹಭಾಗಿತ್ವದಲ್ಲಿ ಚಿತ್ರದ ಪೋಸ್ಟರ್ ಹಾಗೂ ಟ್ರೈಲರ್ ಅನ್ನು ಬಿಡುಗಡೆಯಾಗಿದ್ದು ಸಂಸ್ಥೆಯ ಸದಸ್ಯರಿಂದ ಸ್ಥಳದಲ್ಲಿಯೇ ಚಿತ್ರದ ಟಿಕೇಟ್ ಖರೀದಿಸುವಿಕೆ ಮುಖೇನ ಒಳ್ಳೆಯ ರೆಸ್ಪಾನ್ಸ್ ದೊರಕಿದೆ ಮಾತ್ರವಲ್ಲ ಪುತ್ತೂರಿನ ಭಾರತ್ ಸಿನೆಮಾಸ್‌ನಲ್ಲಿ ಏಕಕಾಲದಲ್ಲಿ ರಾತ್ರಿ ಏಳು ಗಂಟೆಗೆ ನಡೆಯುವ ಎರಡು ಪ್ರೀಮಿಯರ್ ಶೋದ ಟಿಕೇಟ್ ಸೋಲ್ಡ್‌ಔಟ್ ಆಗಿದ್ದು ಚಿತ್ರವು ಸಿನಿರಸಿಕರ ಮನಗೆಲ್ಲುವತ್ತ ಸಾಗುತ್ತಿದೆ.


ಕುತೂಹಲ ಮೂಡಿಸಿರುವ ಸಿನೆಮಾ:
ತುಳು ಚಿತ್ರರಂಗದಲ್ಲಿ ಬಹಳಷ್ಟು ಕುತೂಹಲ ಮೂಡಿಸಿರುವ ತುಳು ಚಿತ್ರ “ತುಡರ್” ಇದರ ಪ್ರೀಮಿಯರ್ ದುಬೈ, ಅಬುಧಾಬಿ, ಕತಾರ್‌ನಲ್ಲಿ ಯಶಸ್ವಿಯಾಗಿ ನೆರವೇರಿಸಿದ್ದು ಚಿತ್ರದ ಬಗ್ಗೆ ಉತ್ತಮ ಸ್ಪಂದನೆ ದೊರಕಿದೆ. ತುಳು ಚಿತ್ರಪ್ರೇಮಿಗಳಿಗೆ ಸಿಹಿ ಸುದ್ದಿಯಾಗಿದ್ದು ಕಿವಿಗಿಂಪಾಗಿಸುವ ಹಾಡುಗಳು, ಭಾವನೆಗಳು, ಆಕ್ಷನ್, ಹಾಸ್ಯ ಮತ್ತು ಗಂಭೀರತೆ ಒಳಗೊಂಡ ಸಂಪೂರ್ಣ ಪ್ಯಾಕೇಜ್‌ವುಳ್ಳ ತುಳು ಮಾಸ್ ಸಿನೆಮಾ ‘ತುಡರ್’ ಪ್ರೇಕ್ಷಕರು ತಮ್ಮ ಕುಟುಂಬಸಮೇತವಾಗಿ ವೀಕ್ಷಿಸಿ ತುಳು ಚಿತ್ರರಂಗವನ್ನು ಬೆಳೆಸಬೇಕು ಎಂದು ಚಿತ್ರತಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜೂ.14:ಕರುನಾಡಿನಾದ್ಯಂತ ಬಿಡುಗಡೆ..
ಸುಮುಖ ಪ್ರೊಡಕ್ಷನ್‌ರವರ ಚೊಚ್ಚಲ ಚಿತ್ರ ಇದಾಗಿದ್ದು ‘ದ ಫೈರ್ ವಿಥ್ ಇನ್’ ಟ್ಯಾಗ್‌ಲೈನ್‌ನೊಂದಿಗೆ ಜೂನ್ 14ರಂದು ಕರುನಾಡಿನಾದ್ಯಂತ ತೆರೆ ಕಾಣಲಿರುವ ಈ ಚಿತ್ರದ ತಾರಾಗಣದಲ್ಲಿ ಸಿದ್ಧಾರ್ಥ್ ಶೆಟ್ಟಿ, ದೀಕ್ಷಾ ಭೀಷೆ, ತುಳುನಾಡಿನ ಮಾಣಿಕ್ಯ ಅರವಿಂದ್ ಬೋಳಾರ್, ಪ್ರಜ್ವಲ್ ಬಂಬ್ರಾಣ, ಹರ್ಷಿತಾ ಶೆಟ್ಟಿ, ಅನ್ವಿತ ಸಾಗರ್, ಸದಾಶಿವ ಅಮೀನ್, ಮೈತಿದಿ ಖ್ಯಾತಿಯ ರೂಪಾ ವರ್ಕಾಡಿ, ನಮಿತಾ ಕೂಳೂರು, ಉಮೇಶ್ ಮಿಜಾರ್, ಅಶೋಕ್ ಬಿ ಇದ್ದಾರೆ. ಮೋಹನ್‌ರಾಜ್ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಎಲ್ಟನ್ ಮಸ್ಕರೇನಸ್ ಹಾಗು ತೇಜೇಶ್ ಪೂಜಾರಿಯವರ ನಿರ್ದೇಶನವಿದ್ದು, ವಿಲ್ಸನ್ ರೆಬೆಲ್ಲೋ ನಿರ್ಮಾಪಕ, ಹರೀಶ್ ಶೆಟ್ಟಿ, ವಿದ್ಯಾ ಸಂಪತ್ ಸಹನಿರ್ಮಾಪಕರಾಗಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

ಏಕಕಾಲದಲ್ಲಿ ಪ್ರೀಮಿಯರ್ ಶೋ
ರಾತ್ರಿ 7 ಗಂಟೆಗೆ, 2 ಶೋ..

LEAVE A REPLY

Please enter your comment!
Please enter your name here