ಉಪ್ಪಿನಂಗಡಿ: ಉಪ್ಪಿನಂಗಡಿ ವೇದಶಂಕರ ನಗರ ಶ್ರೀ ರಾಮ ಶಾಲೆಯಲ್ಲಿ ಜೂ.5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಶಾಲಾ ಆಡಳಿತ ಮಂಡಳಿಯ ಸದಸ್ಯ ಜಯಂತ್ ಪೊರೋಳಿ ಮಾತನಾಡಿ ಬುದ್ಧಿ ಜೀವಿ ಎಂದು ಕರೆಯಲ್ಪಡುವ ಮಾನವನಿಂದಲೇ ಇಂದು ಪರಿಸರ ನಾಶವಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಚಾಲಕ ಯು ಜಿ ರಾಧ ಪರಿಸರ ದಿನಾಚರಣೆ ಕೇವಲ ಮಾತಿಗೆ ಸೀಮಿತವಾಗಿರದೆ ಅದನ್ನು ಸರಿಯಾದ ಕ್ರಮದಲ್ಲಿ ಕಾರ್ಯರೂಪಕ್ಕೆ ತರಬೇಕು. ಈ ವರ್ಷ ಅತಿ ಹೆಚ್ಚು ಬಿಸಿಲಿನ ತಾಪವಿತ್ತು ಮಳೆಯ ಪ್ರಮಾಣ ಕಡಿಮೆಯಾದ್ದರಿಂದ ನೀರಿನ ಅಭಾವ ಉಂಟಾಗುತ್ತಿದೆ. ಆದ್ದರಿಂದ ಮಳೆ ನೀರನ್ನು ಇಂಗಿಸುವ ಕಾರ್ಯ ನಡೆಸಬೇಕಿದೆ. ಗಿಡ ನೆಡುವುದು ಮಾತ್ರವಲ್ಲ ಗಿಡದ ಬೆಳವಣಿಗೆಯನ್ನು ಅಭ್ಯಸಿಸಿ, ದಾಖಲಿಸಿ ಗಿಡಗಳೊಂದಿಗೆ ಪ್ರೀತಿಯ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಮರವಾಗಿ ಬೆಳೆದು ಹಣ್ಣು ನೀಡುವ, ಪ್ರಕೃತಿಯ ಎಲ್ಲಾ ಜೀವಿಗಳನ್ನು ಪೋಷಿಸುವಂತಹ ಗಿಡಗಳನ್ನು ನೆಡಬೇಕು. ಪ್ಲಾಸ್ಟಿಕ್ ಚೀಲಗಳನ್ನು 100% ತ್ಯಜಿಸುವ ಕೆಲಸ ವಿದ್ಯಾರ್ಥಿಗಳಿಂದಲೇ ಆರಂಭವಾಗಬೇಕು ಎಂದರು.
ವೇದಿಕೆಯಲ್ಲಿ ಕೋಶಾಧಿಕಾರಿ ಸುಧೀರ್ ಟಿ.ಎಸ್, ಪ್ರೌಢವಿಭಾಗದ ಮುಖ್ಯಗುರು ರಘುರಾಮ್ ಭಟ್.ಸಿ ಮತ್ತು ಪ್ರಾಥಮಿಕ ವಿಭಾಗದ ಮುಖ್ಯಗುರು ವಿಮಲ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟರು. ನಮಿತಾ ಸ್ವಾಗತಿಸಿ,ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿ, ಜಲಜಾ ವಂದಿಸಿದರು.