ಪುತ್ತೂರು:ಕರ್ನಾಟಕ ವಿಧಾನ ಪರಿಷತ್ನ ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಪದವೀಧರ ಕ್ಷೇತ್ರಗಳ ಮತ ಎಣಿಕೆ ಕಾರ್ಯಗಳು ನಡೆಯುತ್ತಿದ್ದು ಶಿಕ್ಷಕ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಸ್.ಎಲ್ ಬೋಜೇ ಗೌಡ ಎರಡು ಸುತ್ತಿನಲ್ಲಿ 3069 ಮತಗಳ ಮುನ್ನಡೆ ಸಾಧಿಸಿಕೊಂಡಿದ್ದಾರೆ.
ಮತ ಎಣಿಕೆಯ ಪ್ರಥಮ ಸುತ್ತಿನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಸ್.ಎಲ್ ಬೋಜೇ ಗೌಡರವರು 3309 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಕಾಂಗ್ರೆಸ್ನ ಕೆ.ಕೆ ಮಂಜುನಾಥ ಕುಮಾರ್ರವರಿಂದ 1642ಮತಗಳ ಅಂತರದಿಂದ ಮುನ್ನಡೆ ಸಾಧಿಸಿಕೊಂಡಿದ್ದಾರೆ. ಎರಡನೇ ಸುತ್ತಿನಲ್ಲಿ ಎಸ್.ಎಲ್ ಬೋಜೇ ಗೌಡ 6645, ಕಾಂಗ್ರೆಸ್ನ ಕೆ.ಕೆ ಮಂಜುನಾಥ 3576 ಮತಗಳನ್ನು ಪಡೆದುಕೊಂಡಿದ್ದು 3069 ಮತಗಳ ಅಂತರದಲ್ಲಿ ಬೋಜೇ ಗೌಡ ಮುನ್ನಡೆ ಸಾಧಿಸಿದ್ದಾರೆ. ಮತ ಎಣಿಕೆ ಕಾರ್ಯಗಳು ಮೈಸೂರಿನ ಜೆಎಲ್ಬಿ ರಸ್ತೆಯಲ್ಲಿರುವ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ನಡೆಯುತ್ತಿದೆ.